ಇಸಾಬೆಲ್ಲಾ ಸಿನಿಮಾ ಪ್ರವೇಶ ಎಂದು?

7

ಇಸಾಬೆಲ್ಲಾ ಸಿನಿಮಾ ಪ್ರವೇಶ ಎಂದು?

Published:
Updated:
ಇಸಾಬೆಲ್ಲಾ ಸಿನಿಮಾ ಪ್ರವೇಶ ಎಂದು?

ಬಾಲಿವುಡ್‌ ನಟ ಸಲ್ಮಾನ್‌ ಅನೇಕ ಪ್ರತಿಭೆಗಳನ್ನು ಬಾಲಿವುಡ್‌ಗೆ ಪರಿಚಯಿಸಿದ್ದಾರೆ. ಆದರೆ ಈಗ ತಮ್ಮ ಪ್ರಿಯ ಗೆಳತಿ, ನಟಿ ಕತ್ರಿನಾ ಕೈಫ್‌ ಅವರ ತಂಗಿ ಇಸಾಬೆಲ್ಲಾ ಅವರನ್ನು ಬಾಲಿವುಡ್‌ಗೆ ಪರಿಚಯಿಸಲು ಅವರು ನಿರಾಸಕ್ತಿ ತೋರಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಅಮಿತಾಬ್‌ ಬಚ್ಚನ್‌ ಅವರ ‘ಬೂಮ್‌’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದವರು ಕತ್ರಿನಾ ಕೈಫ್‌. ಆದರೆ ಈ ಚಿತ್ರ ಯಾವುದೇ ಸುದ್ದಿ ಮಾಡಲಿಲ್ಲ. ಕೈಫ್‌ಗೂ ಹೆಸರು ತಂದುಕೊಡಲಿಲ್ಲ. ಆದರೆ, 2005ರಲ್ಲಿ ‘ಮೈನೆ ಪ್ಯಾರ್‌ ಕಿಯಾ’ ಮೂಲಕ ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿದರು ಕತ್ರಿನಾ. ಅವರಿಗೆ ಹೀಗೆ ಬಾಲಿವುಡ್‌ನಲ್ಲಿ ದೊಡ್ಡ ಅವಕಾಶ ಮಾಡಿಕೊಟ್ಟವರು ಸಲ್ಮಾನ್‌. ಅದಾದ ಬಳಿಕ ಕತ್ರಿನಾ

ಹಿಂತಿರುಗಿ ನೋಡಲಿಲ್ಲ. ಬಾಲಿವುಡ್‌ ಅತಿ ಹೆಚ್ಚಿನ ಬೇಡಿಕೆಯ ನಟಿ ಹಾಗೂ ಗ್ಲಾಮರಸ್‌ ನಟಿ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದರು.

ಹೀಗಾಗಿ ತಮ್ಮ ಸಹೋದರಿಗೂ ಬಾಲಿವುಡ್‌ನಲ್ಲಿ ಉತ್ತಮ ‘ಓಪನಿಂಗ್‌’ ಕೊಡಿಸುವಂತೆ ಕತ್ರಿನಾ, ಸಲ್ಮಾನ್‌ಗೆ ಮನವಿ ಮಾಡಿಕೊಂಡಿದ್ದರು. ಈ ಹಿಂದೆ, ಕಿಕ್‌– 2 ಚಿತ್ರದಲ್ಲಿ ಇಸಾಬೆಲ್ಲಾ ನಟಿಸಲಿದ್ದಾರೆ ಎಂದು ಸುದ್ದಿ ಹರಡಿತ್ತಾದರೂ ಆ ಅವಕಾಶ ಜಾಕ್ವೆಲಿನ್‌ ಫರ್ನಾಂಡಿಸ್‌ ಪಾಲಾಗಿತ್ತು. ಇಸಾಬೆಲ್ಲಾಗೆ ಸಲ್ಲೂನೇ ಗಾಡ್‌ಫಾದರ್‌ ಎಂದು ಬಾಲಿವುಡ್‌ ಇವತ್ತಿಗೂ ನಂಬಿಕೊಂಡಿದೆ. ಆದರೆ ಸೂಪರ್‌ಸ್ಟಾರ್‌ಗೆ ಇಸಾಬೆಲ್ಲಾ ನಟನಾ ಸಾಮರ್ಥ್ಯ ತೃಪ್ತಿ ತಂದಿಲ್ಲ ಎಂಬುದು ಈಗಿನ ಸಮಾಚಾರ. ಸಿನಿ ಕ್ಷೇತ್ರದ ಪ್ರವೇಶದ ನಿರೀಕ್ಷೆಯಲ್ಲಿರುವ ಇಸಾಬೆಲ್ಲಾ ಅಕ್ಕ

ಕತ್ರಿನಾ ಜೊತೆಗೆ ಹಲವು ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ ಸಲ್ಮಾನ್‌, ಸ್ನೇಹ ಉಲ್ಲಾಳ್‌, ಜರೀನಾ ಖಾನ್‌, ಸೋನಾಕ್ಷಿ ಸಿನ್ಹಾ, ಡೈಸಿ ಶಾ, ಅತಿಯಾ ಶೆಟ್ಟಿ ಮೊದಲಾದವರನ್ನು ಬಾಲಿವುಡ್‌ಗೆ ಪರಿಚಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry