ಬಾಬರಿ ಮಸೀದಿ ಕಟ್ಟಲು ಬಿಡುವುದಿಲ್ಲ: ಕಲ್ಲಡ್ಕ ಪ್ರಭಾಕರ್‌ ಭಟ್‌

7

ಬಾಬರಿ ಮಸೀದಿ ಕಟ್ಟಲು ಬಿಡುವುದಿಲ್ಲ: ಕಲ್ಲಡ್ಕ ಪ್ರಭಾಕರ್‌ ಭಟ್‌

Published:
Updated:

ಶಿವಮೊಗ್ಗ: ಮುಸ್ಲಿಮರು ಯಾವುದಾದರೂ ಸುಂದರ ಕಟ್ಟಡ ಕಂಡರೆ ಅದನ್ನು ಹಾಳು ಮಾಡುತ್ತಿದ್ದರು. ಸೋಮನಾಥ ದೇವಾಲಯ ಪುಡಿ ಮಾಡಿ, ಮಸೀದಿ ಕಟ್ಟಿದರು. ಈಗ ಬಾಬರಿ ಮಸೀದಿ ಕಟ್ಟಬೇಕು ಎನ್ನುತ್ತಾರೆ. ಬಾಬರಿ ಮಸೀದಿ ಕಟ್ಟಲು ಇನ್ನೆಂದೂ ಅವಕಾಶ ಕೊಡುವುದಿಲ್ಲ ಎಂದು ಆರ್‌ಎಸ್‌ಎಸ್‌ ಕ್ಷೇತ್ರ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿದರು.

ತಾಲ್ಲೂಕಿನ ಆಯನೂರಿನಲ್ಲಿ ವಿಶ್ವ ಹಿಂದೂ ಪರಿಷತ್‌ನಿಂದ ಭಾನುವಾರ ಏರ್ಪಡಿಸಿದ್ದ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೂರಾರು ವರ್ಷಗಳಿಂದ ಹಿಂದೂಗಳನ್ನು ಹೇಡಿಗಳನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ. ಪ್ರಸ್ತುತ ದಿನಗಳಲ್ಲಿ ಹಿಂದೂ ಸಮಾಜವನ್ನು ಬದುಕಲು ಬಿಡಿ ಎಂದು ನಾವು ಸರ್ಕಾರದ ಬಳಿ ಭಿಕ್ಷೆ ಬೇಡುವಂತಾಗಿದೆ. ಗಾಂಧೀಜಿ ರಾಮರಾಜ್ಯ ನಿರ್ಮಾಣವಾಗಬೇಕು ಎಂದಿದ್ದರು. ಆದರೆ ದೇಶದಲ್ಲಿಂದು ರಾಮನಿಗೇ ಮರ್ಯಾದೆ ಸಿಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಷಾದಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಜೈಲಿನಲ್ಲಿರುವ ಮುಸ್ಲಿಮರು ಮುಗ್ಧರು ಎಂದು ಬಿಡುಗಡೆಗೊಳಿಸಿದರು. ಸಿದ್ದರಾಮಯ್ಯಗೆ ಮುಸ್ಲಿಮರ ಮೇಲೆ ಪ್ರೀತಿಯಿಲ್ಲ; ಅವರ ವೋಟಿನ ಮೇಲೆ ಪ್ರೀತಿಯಿದೆ. ಕಲ್ಲಡ್ಕ ಶಾಲೆಗೆ ಬರುತ್ತಿದ್ದ ಅನ್ನಕ್ಕೆ ಸಿದ್ದರಾಮಯ್ಯ ತಡೆಯೊಡ್ಡಿದರು. ಕಲ್ಲಡ್ಕದಲ್ಲಿ ಮೂರೂವರೆ ಸಾವಿರ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಆದರೆ ಕನ್ನಡ ಕನ್ನಡ ಎನ್ನುವ ಮುಖ್ಯಮಂತ್ರಿ ಅಲ್ಲಿನ ವಿದ್ಯಾರ್ಥಿಗಳಿಗೆ ಮೋಸ ಮಾಡಿದ್ದಾರೆ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry