ಸಚಿವ ಅನಂತಕುಮಾರ ವಿರುದ್ಧ ಅವಹೇಳನಕಾರಿ ಬರಹ: ದೂರು

7

ಸಚಿವ ಅನಂತಕುಮಾರ ವಿರುದ್ಧ ಅವಹೇಳನಕಾರಿ ಬರಹ: ದೂರು

Published:
Updated:
ಸಚಿವ ಅನಂತಕುಮಾರ ವಿರುದ್ಧ ಅವಹೇಳನಕಾರಿ ಬರಹ: ದೂರು

ಶಿರಸಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ ಖಾತೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಚಿವರ ಆಪ್ತ ಸಹಾಯಕ ಸುರೇಶ ಶೆಟ್ಟಿ ಇಲ್ಲಿನ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲಿಸಿದ್ದಾರೆ.

‘ಬಿಜೆಪಿ ಅಧಿಕಾರಕ್ಕೆ ಬಂದರೆ ಕೆಂಪೇಗೌಡ ಪ್ರತಿಮೆಯನ್ನು ಉರುಳಿಸಿ, ಶಿವಾಜಿ ಪ್ರತಿಮೆಯನ್ನು ಸ್ಥಾಪಿಸುತ್ತೇವೆ–ಅನಂತಕುಮಾರ ಹೆಗಡೆ’ ಎಂಬ ಬರಹವನ್ನು ಅನಂತಕುಮಾರ ಅವರೇ ಹೇಳಿದ್ದಾರೆ ಎನ್ನುವ ರೀತಿಯಲ್ಲಿ ಪ್ರಜಾಕೀಯ ಎನ್ನುವ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಆ ಮೂಲಕ ಕನ್ನಡಿಗರಿಗೆ ಹೆಗಡೆ ಅವರ ಮೇಲೆ ದ್ವೇಷ ಹುಟ್ಟಿಸಲು ಪ್ರಯತ್ನಿಸಲಾಗಿದೆ. ಸಚಿವರು ಎಲ್ಲಿಯೂ, ಕೆಂಪೇಗೌಡರ ಬಗ್ಗೆ ಮಾತನಾಡಿಲ್ಲ. ಇದಕ್ಕೆ ಸಂಬಂಧಿಸಿ, ಮಂಜು ಪವರ್‌ಸ್ಟಾರ್ ಎಂಬುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ‘ಅನಂತಕುಮಾರ ಹೆಗಡೆಯವರು ಬೆಂಗಳೂರಿಗೆ ಬರುವಂತಿಲ್ಲ’ ಎಂದು ಬೆದರಿಕೆ ಹಾಕಿದ್ದಾರೆ. ಈ ಎಲ್ಲ ಪೋಸ್ಟ್‌ಗಳ ಹಿಂದೆ ಇರುವ ಕಾಣದ ಕೈಗಳನ್ನು ಗುರುತಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry