ಅಕ್ಕ ತಂಗಿ ಕದನಕ್ಕೆ ವೇದಿಕೆ ಸಜ್ಜು

7

ಅಕ್ಕ ತಂಗಿ ಕದನಕ್ಕೆ ವೇದಿಕೆ ಸಜ್ಜು

Published:
Updated:
ಅಕ್ಕ ತಂಗಿ ಕದನಕ್ಕೆ ವೇದಿಕೆ ಸಜ್ಜು

ಇಂಡಿಯನ್ ವೆಲ್ಸ್‌: ಸಹೋದರಿಯರ ಪೈಪೋಟಿಗೆ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ. ಇಲ್ಲಿ ನಡೆಯುತ್ತಿರುವ ಇಂಡಿಯಾನ ವೆಲ್ಸ್‌ ಟೆನಿಸ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಗೆದ್ದ ಅಮೆರಿಕದ ಸೆರೆನಾ ವಿಲಿಯಮ್ಸ್‌ ಮೂರನೇ ಸುತ್ತಿನಲ್ಲಿ ಅಕ್ಕ ವೀನಸ್ ವಿಲಿಯಮ್ಸ್ ಅವರನ್ನು ಎದುರಿಸುವರು.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಸೆರೆನಾ 7–6, 7–5ರಿಂದ ನೆದರ್ಲೆಂಡ್ಸ್‌ನ ಕಿಕಿ ಬೆರ್ಟನ್ಸ್ ಎದುರು ಗೆದ್ದರು. ವೀನಸ್‌ 6–3, 6–4ರಲ್ಲಿ ಸೊರಾನ ಸಿರ್ಟ್ಸಿಯಾ ಅವರನ್ನು ಮಣಿಸಿದರು.

ವಿಲಿಯಮ್ಸ್‌ ಸಹೋದರಿಯರು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದಾರೆ.  ಹೋದ ವರ್ಷದ ಆಸ್ಟ್ರೇಲಿಯಾ ಓಪನ್‌ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದರು. ಈ ಪಂದ್ಯದಲ್ಲಿ ವೀನಸ್‌ 6–4, 6–4ರಿಂದ ಗೆದ್ದಿದ್ದರು.

ರೋಜರ್ ಫೆಡರರ್, ಆಡಬೇಕಿದ್ದ ಮೊದಲ ಪಂದ್ಯ ಮಳೆಯ ಕಾರಣ ರದ್ದುಪಡಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry