ಸೌರಶಕ್ತಿ ಕ್ರಾಂತಿಗೆ ಮೋದಿ ಪಣ

7

ಸೌರಶಕ್ತಿ ಕ್ರಾಂತಿಗೆ ಮೋದಿ ಪಣ

Published:
Updated:

ನವದೆಹಲಿ: ಜಗತ್ತಿನಾದ್ಯಂತ ಸೌರಶಕ್ತಿ ಕ್ರಾಂತಿಗೆ ಭಾರತ ಪಣ ತೊಟ್ಟಿದೆ. 15 ದೇಶಗಳಲ್ಲಿ ಸುಮಾರು ₹9,000 ಕೋಟಿ ಮೊತ್ತದ ಯೋಜನೆಗಳನ್ನು ಆರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಂತರರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟದ (ಐಎಸ್‌ಎ) ಮೊದಲ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಸೌರಶಕ್ತಿ ತಂತ್ರಜ್ಞಾನ ವಿಸ್ತರಣೆಗೆ ಸುಲಭ ಮತ್ತು ಸರಳವಾಗಿ ಹಣಕಾಸು ದೊರೆಯಬೇಕಾದ ಅಗತ್ಯ ಇದೆ ಎಂದರು. 

ಸೌರಶಕ್ತಿಯನ್ನು ಬಳಸಿಕೊಳ್ಳುವ ಅವಕಾಶ ಸಮೃದ್ಧವಾಗಿರುವ 121 ದೇಶಗಳ ಜಾಗತಿಕ ವೇದಿಕೆ ರೂಪಿಸಬೇಕು ಎಂದು ಮೂರು ವರ್ಷಗಳ ಹಿಂದೆ ಮೋದಿ ಕರೆ ಕೊಟ್ಟಿದ್ದರು. ಸೌರಶಕ್ತಿಯು ಎಲ್ಲ ದೇಶಗಳಿಗೂ ಎಟಕುವಂತಾಗಲು ಹತ್ತು ಅಂಶಗಳ ಕ್ರಿಯಾ ಯೋಜನೆಯನ್ನು ಅವರು ಸಮಾವೇಶದಲ್ಲಿ ಬಿಡಿಸಿಟ್ಟರು.

ಭಾರತದ ಅನುದಾನದ 15 ಯೋಜನೆಗಳಲ್ಲಿ ಎರಡು ಏಷ್ಯಾದಲ್ಲಿ ಮತ್ತು ಉಳಿದವು ಆಫ್ರಿಕಾ ಖಂಡದಲ್ಲಿ ಅನುಷ್ಠಾನಗೊಳ್ಳಲಿವೆ. ಮಾಲಿ, ನೈಜೀರಿಯಾ, ರುವಾಂಡ ಮತ್ತು ತಾಂಜಾನಿಯಾ ದೇಶಗಳು ಆಫ್ರಿಕಾ ಖಂಡದ ಫಲಾನುಭವಿಗಳಾಗಲಿವೆ.

2030ರ ಹೊತ್ತಿಗೆ ಜಗತ್ತಿನ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು 1,000 ಗಿಗಾವಾಟ್‌ಗೆ (ಒಂದು ಗಿಗಾವಾಟ್‌ ಎಂದರೆ ನೂರು ಕೋಟಿ ವಾಟ್‌) ಏರಿಸುವುದು ಮತ್ತು ಇದಕ್ಕಾಗಿ ಒಂದು ಲಕ್ಷ ಕೋಟಿ ಡಾಲರ್‌ (ಸುಮಾರು ₹65 ಲಕ್ಷ ಕೋಟಿ) ಹೂಡಿಕೆ ಮಾಡುವುದು ಐಎಸ್‌ಎ ಗುರಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry