4
ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಎಚ್ಚರಿಕೆ

ದೇಶ ನಿರ್ಮಾಣಕ್ಕೆ ಕೈಜೋಡಿಸದಿದ್ದರೆ ಎಳೆದೊಯ್ಯುತ್ತೇವೆ: ಹೆಗಡೆ ಎಚ್ಚರಿಕೆ

Published:
Updated:
ದೇಶ ನಿರ್ಮಾಣಕ್ಕೆ ಕೈಜೋಡಿಸದಿದ್ದರೆ ಎಳೆದೊಯ್ಯುತ್ತೇವೆ: ಹೆಗಡೆ ಎಚ್ಚರಿಕೆ

ಬೆಂಗಳೂರು: ‘ಕೌಶಲ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಲೇಬೇಕು. ಒಂದು ವೇಳೆ ನಮ್ಮ ಜೊತೆ ಬರದಿದ್ದರೆ, ಅವರನ್ನು ಹೇಗೆ ಕರೆದುಕೊಂಡು ಹೋಗಬೇಕೆಂದು ಸರ್ಕಾರಕ್ಕೆ ಗೊತ್ತಿದೆ’ ಎಂದು ಕೇಂದ್ರ ಕೌಶಲ ಅಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಎಚ್ಚರಿಕೆ ನೀಡಿದರು.

ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಗ್ರಾಮೀಣ ಯುವಜನತೆಯ ಪಯಣ’ ಕುರಿತ ಸಂವಾದದಲ್ಲಿ ಮಾತನಾಡಿದರು.

‘ಸ್ವಾತಂತ್ರ್ಯ ಹೋರಾಟದ ಪಯಣಕ್ಕೆ ಜೊತೆಯಾಗುತ್ತೇವೆ ಎನ್ನುವವರನ್ನು ಸಂತೋಷದಿಂದ ಕರೆದುಕೊಂಡು ಹೋಗುತ್ತೇವೆ. ಇಲ್ಲ ಎನ್ನುವವರನ್ನು ಬಿಟ್ಟು ಸಾಗುತ್ತೇವೆ. ನಮ್ಮ ದಾರಿಗೇನಾದರೂ ಅಡ್ಡವಾದರೆ ಅವರ ತಲೆಮೇಲೆ ಕಾಲಿಟ್ಟು ಮುಂದೆ ಸಾಗುತ್ತೇವೆ ಎಂದು ವೀರ ಸಾವರ್ಕರ್‌ ಹೇಳುತ್ತಿದ್ದರು. ಆದರೆ, ಈಗ ಹಾಗೆ ಹೇಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಬಂದಿದೆ. ಜೊತೆಗೆ ಬಾರದವರನ್ನು ಬಿಟ್ಟು ಹೋಗುವುದಿಲ್ಲ, ಎಳೆದುಕೊಂಡೇ ಹೋಗುತ್ತೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry