ತಮಿಳುನಾಡು: ಕಾಡ್ಗಿಚ್ಚಿಗೆ 9 ಚಾರಣಿಗರು ಬಲಿ, 27 ಮಂದಿಯ ರಕ್ಷಣೆ

7

ತಮಿಳುನಾಡು: ಕಾಡ್ಗಿಚ್ಚಿಗೆ 9 ಚಾರಣಿಗರು ಬಲಿ, 27 ಮಂದಿಯ ರಕ್ಷಣೆ

Published:
Updated:
ತಮಿಳುನಾಡು: ಕಾಡ್ಗಿಚ್ಚಿಗೆ 9 ಚಾರಣಿಗರು ಬಲಿ, 27 ಮಂದಿಯ ರಕ್ಷಣೆ

ಥೇಣಿ: ತಮಿಳುನಾಡಿನ ಕುರಾಂಗಣಿ ಬೆಟ್ಟದ ತಪ್ಪಲಿನಲ್ಲಿ ಭಾನುವಾರ ರಾತ್ರಿ ಉಂಟಾಗಿರುವ ಬೃಹತ್ ಕಾಡ್ಗಿಚ್ಚಿಗೆ 9 ಚಾರಣಿಗರು ಬಲಿಯಾಗಿದ್ದಾರೆ.

ಕಾಡ್ಗಿಚ್ಚು ಉಂಟಾಗಿದ್ದ ಸಂದರ್ಭ ಒಟ್ಟು 36 ಚಾರಾಣಿಗರು ನಾಪತ್ತೆಯಾಗಿದ್ದರು. 9 ಮಂದಿ ಮೃತಪಟ್ಟಿದ್ದು, 27 ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ ಗಾಯಗೊಂಡಿರುವ 17 ಚಾರಣಿಗರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 10 ಮಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೃತರ ಪೈಕಿ ಆರು ಮಂದಿ ಚೆನ್ನೈನವರು ಹಾಗೂ ಮೂವರು ಎರೋಡ್‌ನವರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ...

ತಮಿಳುನಾಡು: ಕಾಡ್ಗಿಚ್ಚಿನಲ್ಲಿ ಸಿಲುಕಿದ 36 ಚಾರಣಿಗರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry