ನೀಲಗಿರಿ ತೋಪಿಗೆ ಬೆಂಕಿ: ವ್ಯಕ್ತಿ ಸಜೀವ ದಹನ

ಭಾನುವಾರ, ಮಾರ್ಚ್ 24, 2019
27 °C

ನೀಲಗಿರಿ ತೋಪಿಗೆ ಬೆಂಕಿ: ವ್ಯಕ್ತಿ ಸಜೀವ ದಹನ

Published:
Updated:
ನೀಲಗಿರಿ ತೋಪಿಗೆ ಬೆಂಕಿ: ವ್ಯಕ್ತಿ ಸಜೀವ ದಹನ

ಕೊರಟಗೆರೆ: ತಾಲ್ಲೂಕಿನ ಡಿ.ನಾಗೇನಹಳ್ಳಿ ಹತ್ತಿರ ವೃದ್ಧರೊಬ್ಬರು ಭಾನುವಾರ ಸಂಜೆ ಸಜೀವ ದಹನವಾಗಿದ್ದಾರೆ. ನಾರಾಯಣಪ್ಪ(70) ಮೃತಪಟ್ಟವರು.

ಗ್ರಾಮದಿಂದ ಸ್ವಲ್ಪ ದೂರದಲ್ಲಿ ಇವರ ಜಮೀನಿದ್ದು, ಅದರ ಪಕ್ಕವೇ ನೀಲಗಿರಿ ತೋಪು ಇದೆ. ನಿರ್ಜನ ಪ್ರದೇಶವಾಗಿದೆ. ಅಲ್ಲಿಗೆ ದನಗಳನ್ನು ಮೇಯಿಸಲು ಎಂದಿನಂತೆ ಭಾನುವಾರವೂ ನಾರಾಯಣಪ್ಪ ಹೋಗಿದ್ದರು. ಅವರ ಕಾಲು ಸ್ವಲ್ಪಮಟ್ಟಿಗೆ ಸ್ವಾಧೀನ ಕಳೆದುಕೊಂಡಿತ್ತು ಎಂದು ಕೋಳಾಲ ಠಾಣೆ ಸಬ್ ಇನ್‌ಸ್ಪೆಕ್ಟರ್ ಸಂತೋಷ್ ತಿಳಿಸಿದರು.

ಬೇಸಿಗೆ ಕಾಲದಲ್ಲಿ ನೀಲಗಿರಿ ತೋಪಿನಲ್ಲಿನ ಹುಲ್ಲಿಗೆ ಬೆಂಕಿ ಹಚ್ಚುತ್ತಾರೆ. ಭಾನುವಾರವೂ ಯಾರೊ ಹಚ್ಚಿದ ಬೆಂಕಿ ವ್ಯಾಪಿಸಿಕೊಂಡಿದೆ. ನಾರಾಯಣಪ್ಪ ಅವರು ಅದರಿಂದ ಹೊರಬರಲಾಗದೇ ಸಜೀವ ದಹನವಾಗಿದ್ದಾರೆ ಎಂದು ಸಬ್ ಇನ್‌ಸ್ಪೆಕ್ಟರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry