ಸೇನಾಪಡೆಯಿಂದ ಮೂವರು ಉಗ್ರರ ಹತ್ಯೆ

7

ಸೇನಾಪಡೆಯಿಂದ ಮೂವರು ಉಗ್ರರ ಹತ್ಯೆ

Published:
Updated:
ಸೇನಾಪಡೆಯಿಂದ ಮೂವರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಸೋಮವಾರ ಮೂವರು ಉಗ್ರರನ್ನು ಸೇನಾಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿವೆ.

ಮೃತಪಟ್ಟವರ ಪೈಕಿ ಇಬ್ಬರನ್ನು ಶ್ರೀನಗರದ ಸೌರಾ ಪ್ರದೇಶದ ಈಸಾ ಫಝ್ಲಿ, ದಕ್ಷಿಣ ಕಾಶ್ಮೀರದ ಸೈಯದ್ ಓವೈಸ್ ಎಂದು ಗುರುತಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಉಗ್ರರಿಂದ ಎಕೆ-47 ರೈಫಲ್‍ಗಳು, ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆ ಸೌರ ಪ್ರದೇಶದ ಪೊಲೀಸ್ ಚೌಕದ ಮೇಲೆ ನಡೆದಿದ್ದ ದಾಳಿಯಲ್ಲಿಯೂ ಈ ಉಗ್ರರು ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು ಮೃತಪಟ್ಟಿದ್ದರು.

ಸದ್ಯ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry