ಬಾಲಿವುಡ್‌ ಗಲ್ಲಿಯ ಗಿನ್ನಿಸ್‌ ಗರಿಮೆ

7

ಬಾಲಿವುಡ್‌ ಗಲ್ಲಿಯ ಗಿನ್ನಿಸ್‌ ಗರಿಮೆ

Published:
Updated:
ಬಾಲಿವುಡ್‌ ಗಲ್ಲಿಯ ಗಿನ್ನಿಸ್‌ ಗರಿಮೆ

1. ಕಪೂರ್‌ ಕುಟುಂಬ: ಒಂದೇ ಕುಟುಂಬದ ಅತಿ ಹೆಚ್ಚು ಸದಸ್ಯರು ನಟನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಗರಿಮೆ ಇವರದ್ದು.  ಪೃಥ್ವಿರಾಜ್‌ ಕಪೂರ್‌ ಅವರಿಂದ ಕರೀಷ್ಮಾ, ಕರೀನಾ, ರಣಬೀರ್‌ ಕಪೂರ್‌ ಸೇರಿದಂತೆ ಕಪೂರ್‌ ಕುಟುಂಬದ ಸುಮಾರು 24 ಜನ ಸದಸ್ಯರು ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಹಿಂದಿ ಸಿನಿಮಾ ಜಗತ್ತಿನಲ್ಲಿ ಅತಿ ಹೆಚ್ಚು ಕುಟುಂಬ ಸದಸ್ಯರು ತೊಡಗಿಸಿಕೊಂಡ ಒಂದೇ ಕುಟುಂಬ ಎಂಬ ಗಿನ್ನೆಸ್‌ ವಿಶ್ವ ದಾಖಲೆಗೆ 1999ರಲ್ಲಿ ಕಪೂರ್‌ ಕುಟುಂಬ ಸೇರ್ಪಡೆಯಾಯಿತು.

2. ‘ಬಾಹುಬಲಿ: ದಿ ಬಿಗಿನಿಂಗ್‌’ ಅತಿ ದೊಡ್ಡ ಸಿನಿಮಾ ಪೋಸ್ಟರ್‌ ಎಂಬ ಬಿರುದು ಪಡೆದಿದೆ. ಎಸ್‌.ಎಸ್‌ ರಾಜಮೌಳಿ ಅವರ ‘ಬಾಹುಬಲಿ– ದಿ ಬಿಗಿನಿಂಗ್‌’ ಸಿನಿಮಾದ ಪೋಸ್ಟರ್‌ ಈ ಹಿಂದಿನ ಎಲ್ಲಾ ಪೋಸ್ಟರ್‌ ದಾಖಲೆಗಳನ್ನು ಅಳಿಸಿ ಹಾಕಿ, ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಯಿತು. ಈ ಸಿನಿಮಾದ ಪೋಸ್ಟರ್‌ 50 ಸಾವಿರ ಚದರ ಅಡಿ ಉದ್ದ ಹಾಗೂ 4,793 ಮೀ. ಅಗಲವಿತ್ತು. ಇದನ್ನು ಕೊಚ್ಚಿಯ ಗ್ಲೋಬಲ್‌ ಯುನೈಟೆಡ್‌ ಮೀಡಿಯಾ ಕಂಪೆನಿ 2015ರ ಜೂನ್‌ 27ರಂದು ತಯಾರಿಸಿತ್ತು.

3. ಆಶಾ ಭೋಸ್ಲೆ: 20 ಭಾಷೆಗಳಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಹಿನ್ನೆಲೆ ಗಾಯಕಿ ಪಟ್ಟ ಗಳಿಸಿದ್ದಾರೆ.

ಭಾರತದ ‘ಮೆಲೊಡಿ ಕ್ವೀನ್‌’ ಎಂದೇ ಖ್ಯಾತರಾದ ಆಶಾ ಭೋಸ್ಲೆ ಅವರು 20 ಭಾಷೆಗಳಲ್ಲಿ ಸುಮಾರು 11 ಸಾವಿರಕ್ಕೂ ಹೆಚ್ಚು ಏಕವ್ಯಕ್ತಿ, ಯುಗಳ ಹಾಗೂ ಗುಂಪು ಹಾಡುಗಳನ್ನು ಹಾಡಿ ಗಿನ್ನೆಸ್‌ ದಾಖಲೆ ಮಾಡಿದ್ದಾರೆ. ಗ್ರಾಮೀಣ ಭಾಷೆಗಳಲ್ಲಿ ದಮ್‌ ಮಾರೋ ದಮ್‌, ಚುರಾ ಲಿಯಾ ಮೊದಲಾದ ಹಾಡುಗಳನ್ನು ಹಾಡಿದ ಕೀರ್ತಿ ಇವರದು.

4. ಕಹೋ ನಾ ಪ್ಯಾರ್‌ ಹೈ: ಅತಿ ಹೆಚ್ಚು ಪ್ರಶಸ್ತಿ ಪಡೆದ ಚಿತ್ರ. ಇದು ಹೃತಿಕ್‌ ರೋಶನ್‌ ಅವರ ಮೊದಲ ಚಿತ್ರ. ಅಮಿಷಾ ಪಟೇಲ್‌ ನಾಯಕಿಯಾಗಿ ನಟಿಸಿದ್ದ ಈ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಈ ಚಿತ್ರಕ್ಕೆ ಒಟ್ಟು 92 ಪ್ರಶಸ್ತಿ ಸಂದಿತ್ತು. ಆ ಮೂಲಕ ಅತಿ ಹೆಚ್ಚು ಪ್ರಶಸ್ತಿ ಪಡೆದ ಚಿತ್ರ ಎಂದು ಗಿನ್ನೆಸ್‌ ದಾಖಲೆಗೆ ಸೇರಿದೆ.

5. ಜಗದೀಶ್ ರಾಜ್‌: ಅತಿ ಹೆಚ್ಚು ಬಾರಿ ಒಂದೇ ಮಾದರಿಯ ಪಾತ್ರ ಮಾಡಿದ ನಟ ಎಂಬ ಹೆಸರು ಗಳಿಸಿದ್ದಾರೆ.

ದಿವಂಗತ ನಟ ಜಗದೀಶ್‌ ರಾಜ್‌ ಅವರು ಸಿನಿಮಾಗಳಲ್ಲಿ ಅತಿ ಹೆಚ್ಚು ಬಾರಿ ಒಂದೇ ಮಾದರಿಯ ಪಾತ್ರ ಮಾಡಿರುವ ನಟ ಎಂದು ಗಿನ್ನೆಸ್‌ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ. ಜನಪ್ರಿಯ ಸಿನಿಮಾಗಳಾದ ದೀವಾರ್‌, ಡಾನ್‌, ಸಿಲ್ಸಿಲಾ ಚಿತ್ರ ಸೇರಿದಂತೆ ಇವರು 144 ಸಿನಿಮಾಗಳಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ನಿರ್ವಹಿಸಿದ್ದರು.

6. ಕುಮಾರ್‌ ಸಾನು: ಒಂದೇ ದಿನದಲ್ಲಿ ಅತಿ ಹೆಚ್ಚು ಹಾಡು ಹಾಡಿದ ಗರಿಮೆ ಪಡೆದಿದ್ದಾರೆ. 90 ದಶಕದಿಂದಲೇ ಕುಮಾರ್‌ ಸಾನು ಅವರು ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. 1993ರಲ್ಲಿ ಒಂದು ದಿನದಲ್ಲಿ 23 ಹಾಡುಗಳನ್ನು ಹಾಡಿದ್ದರು. ಇದಕ್ಕಾಗಿ ಇವರಿಗೆ ಈ ಕೀರ್ತಿ ಸಂದಿದೆ.

7. ಲಲಿತಾ ಪವಾರ್‌: ಬಾಲಿವುಡ್‌ನಲ್ಲಿ ಅತಿ ಹೆಚ್ಚು ಕಾಲ ವೃತ್ತಿ ಜೀವನ ತೊಡಗಿಸಿಕೊಂಡ ನಟಿ. ಈ ನಟಿ ಬಜಾರಿ ಅತ್ತೆಯಾಗಿಯೇ ಬಾಲಿವುಡ್‌ನಲ್ಲಿ ಜನಪ್ರಿಯರು. ತಮ್ಮ 12ನೇ ವಯಸ್ಸಿನಲ್ಲಿ ಬಾಲಿವುಡ್‌ ಪ್ರವೇಶಿಸಿದ್ದ ಲಲಿತಾ, ಏಳು ದಶಕಗಳ ಕಾಲ ಬಾಲಿವುಡ್‌ನಲ್ಲಿ ನಟಿಸಿರು. 700ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು 1998ರ ಫೆಬ್ರುವರಿಯಲ್ಲಿ ತೀರಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry