ಪೆಟ್ರೋಲ್‌ಬಂಕ್‌ನಲ್ಲಿ ಗ್ರಾಹಕರಿಗೆ ಆತಿಥ್ಯ

ಮಂಗಳವಾರ, ಮಾರ್ಚ್ 26, 2019
33 °C

ಪೆಟ್ರೋಲ್‌ಬಂಕ್‌ನಲ್ಲಿ ಗ್ರಾಹಕರಿಗೆ ಆತಿಥ್ಯ

Published:
Updated:
ಪೆಟ್ರೋಲ್‌ಬಂಕ್‌ನಲ್ಲಿ ಗ್ರಾಹಕರಿಗೆ ಆತಿಥ್ಯ

ರಾಜ್ಯದಲ್ಲಿ ಸಂಚಾರ ದಟ್ಟಣೆ ಹೆಚ್ಚು ಇರುವ ರಸ್ತೆಗಳಲ್ಲಿ ಮೈಸೂರು ರಸ್ತೆಯೂ ಒಂದು. 149 ಕಿ.ಮೀ. ಉದ್ದದ ಈ ರಸ್ತೆಯು ಕೇವಲ ಬೆಂಗಳೂರು– ಮೈಸೂರು ನಗರಗಳನ್ನು ಸಂಪರ್ಕಿಸುವ ಸಂಪರ್ಕ ರಸ್ತೆಯಾಗಿಯಷ್ಟೇ ಬಳಕೆಯಾಗುತ್ತಿಲ್ಲ.

ಇದು ಬೆಂಗಳೂರಿಗರ ಪಾಲಿಗೆ ಪಿಕ್‌ನಿಕ್ ಸ್ಪಾಟ್, ಪ್ರೇಮಿಗಳಿಗೆ ಲಾಂಗ್‌ಡ್ರೈವ್ ತಾಣ, ಸಾಕಷ್ಟು ಹೋಟೆಲ್‌ಗಳಿರುವುದರಿಂದ ರಾತ್ರಿ ಊಟಕ್ಕೆ ಹ್ಯಾಂಗ್‌ಔಟ್ ರಸ್ತೆಯೂ ಆಗಿದೆ. ಹೊಸ ವಾಹನ ಖರೀದಿಸಿದವರು ಪೂಜೆಯ ನಂತರ ಮೈಸೂರು ರಸ್ತೆಯಲ್ಲಿ ಒಂದು ಸುತ್ತು ಓಡಿಸುವುದು ವಾಡಿಕೆಯೇ ಆಗಿದೆ.

ಕೆಂಗೇರಿ ಸಮೀಪದ ಐಬಿಎಸ್ ಕಾಲೇಜು ಸನಿಹದಲ್ಲಿರುವ ‘ಮಾರುತಿ ಸೇವಾ ಕೇಂದ್ರ’ ಹೆಸರಿನ ಪೆಟ್ರೋಲ್ ಬಂಕ್ ಗ್ರಾಹಕರ ಗಮನ ಸೆಳೆಯುತ್ತಿದೆ. ಈ ಪೆಟ್ರೋಲ್‌ ಬಂಕ್‌ನಲ್ಲಿ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು, ಶೌಚಗೃಹಗಳು, ಸ್ನಾನಗೃಹಗಳು, ವಾಹನ ಪರಿಶೀಲನೆ, ಟ್ಯೂಬ್ ಬದಲಾವಣೆ ಸೌಕರ್ಯ ಕಲ್ಪಿಸಲಾಗಿದೆ. ಅಗತ್ಯ ಪರಿಕರಗಳನ್ನು ಮಾರುವ ಸಣ್ಣ ಅಂಗಡಿಯೂ ಇದೆ.

ಇಲ್ಲಿರುವ ಉದ್ಯಾನವನದ ಕಲ್ಲಿನ ಚಪ್ಪಡಿಗಳ ಕಾಲುಹಾದಿ ಆಕರ್ಷಕವಾಗಿದೆ. ಊಟದ ಮೇಜು ಮತ್ತು ಹುಲ್ಲುಹಾಸಿನೊಂದಿಗೆ ಡಿಸೈನರ್ ಕಲ್ಲಿನ ಬೆಂಚ್ ಅಳವಡಿಸಲಾಗಿದೆ.

ಹೂ ಬಿಡುವ ಸಸ್ಯಗಳು ಮನಸಿಗೆ ಆಹ್ಲಾದ ನೀಡುತ್ತವೆ. ಪ್ರತಿದಿನ ಸರಾಸರಿ 300 ಪ್ರಯಾಣಿಕರು ಈ ಸೌಲಭ್ಯ ಬಳಸುತ್ತಾರೆ.

ದಸರಾಗೆ ತೆರಳುವ ಪ್ರವಾಸಿಗರು, ಅಯ್ಯಪ್ಪ ಮಾಲೆ ಧರಿಸಿದ ಭಕ್ತರು, ಮಾಘ ಸ್ನಾನಕ್ಕೆಂದು ತೆರಳುವ ಶ್ರದ್ಧಾಳುಗಳು, ಬೇಸಿಗೆ ರಜೆಯಲ್ಲಿ ಪ್ರವಾಸ ತೆರಳುವ ಶಾಲಾ ವಿದ್ಯಾರ್ಥಿಗಳಿಗೆ ಈ ಸೌಕರ್ಯ ಖುಷಿಕೊಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry