ಪ್ರಮಾಣವಚನ ಸ್ವೀಕರಿಸಿದ ಕೊಲಿ

7

ಪ್ರಮಾಣವಚನ ಸ್ವೀಕರಿಸಿದ ಕೊಲಿ

Published:
Updated:
ಪ್ರಮಾಣವಚನ ಸ್ವೀಕರಿಸಿದ ಕೊಲಿ

ಇಸ್ಲಾಮಾಬಾದ್ : ಪಾಕಿಸ್ತಾನ ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾಗಿರುವ ದಲಿತ ಸಮುದಾಯದ ಕೃಷ್ಣಕುಮಾರಿ ಕೊಲಿ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ಸಿಂಧ್ ಪ್ರಾಂತ್ಯದ ಸಾಂಪ್ರದಾಯಿಕ ಥಾರಿ ಉಡುಗೆ ತೊಟ್ಟು ಅವರು ಸಂಸತ್‌ಗೆ ಕುಟುಂಬದೊಂದಿಗೆ ಬಂದಿದ್ದರು.

ಸಿಂಧ್‌ ಪ್ರಾಂತ್ಯದ ನಾಗಾರ್ಪಾರ್ಕರ್ ಜಿಲ್ಲೆಯ 39 ವರ್ಷದ ಕೊಲಿ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಅಲ್ಪಸಂಖ್ಯಾತರ ಮೀಸಲಿನಿಂದ ಆಯ್ಕೆಯಾಗಿದ್ದಾರೆ.

ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಜೊತೆಗೆ ಆರೋಗ್ಯ ಸುಧಾರಣೆ, ನೀರಿನ ಕೊರತೆ ನಿವಾರಿಸಲು ದುಡಿಯುವುದಾಗಿ ಕೊಲಿ ಪಾಕಿಸ್ತಾನ ಮಾಧ್ಯಮಗಳಿಗೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry