ರಾಷ್ಟ್ರಪತಿ, ಪ್ರಧಾನಿಗೆ ಪ್ರತ್ಯೇಕ ವಿಮಾನ

7

ರಾಷ್ಟ್ರಪತಿ, ಪ್ರಧಾನಿಗೆ ಪ್ರತ್ಯೇಕ ವಿಮಾನ

Published:
Updated:

ನವದೆಹಲಿ: ‘ರಾಷ್ಟ್ರಪತಿ, ಪ್ರಧಾನಿ ಮತ್ತು ಉಪರಾಷ್ಟ್ರಪತಿ ಬಳಕೆಗಾಗಿ ವಿನ್ಯಾಸಗೊಳಿಸಿದ ಪ್ರತ್ಯೇಕ ವಿಮಾನಗಳು 2020ರ ವೇಳೆಗೆ ಸಿದ್ಧವಾಗಲಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಇದಕ್ಕಾಗಿ ಏರ್‌ ಇಂಡಿಯಾವು ಎರಡು ಬೋಯಿಂಗ್‌ ವಿಮಾನಗಳನ್ನು ತರಿಸಿದ್ದು, ಅದರಲ್ಲಿ ಗಣ್ಯರಿಗೆ ಪತ್ರಿಕಾಗೋಷ್ಠಿ ನಡೆಸುವ ಕೋಣೆ, ವೈದ್ಯಕೀಯ ತುರ್ತು ಸೇವೆ ಮೊದಲಾದ ಸೌಲಭ್ಯ ಅಳವಡಿಸಲಾಗುವುದು’ ಎಂದಿದ್ದಾರೆ.

‘ವಿಮಾನದಲ್ಲಿ ವೈಫೈ ಸೌಲಭ್ಯ ಹಾಗೂ ಕ್ಷಿಪಣಿ ನಿರೋಧಕ ರಕ್ಷಣಾ ವ್ಯವಸ್ಥೆ ಕೂಡ ಇರಲಿದೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry