ಸಮಾಜವಾದಿ ಪಕ್ಷದ ನರೇಶ್ ಅಗರ್‌ವಾಲ್ ಬಿಜೆಪಿಗೆ

ಬುಧವಾರ, ಮಾರ್ಚ್ 20, 2019
23 °C

ಸಮಾಜವಾದಿ ಪಕ್ಷದ ನರೇಶ್ ಅಗರ್‌ವಾಲ್ ಬಿಜೆಪಿಗೆ

Published:
Updated:
ಸಮಾಜವಾದಿ ಪಕ್ಷದ ನರೇಶ್ ಅಗರ್‌ವಾಲ್ ಬಿಜೆಪಿಗೆ

ನವದೆಹಲಿ: ರಾಜ್ಯಸಭೆಗೆ ಮರುನಾಮಕರಣ ಮಾಡದ್ದರಿಂದ ಅಸಮಾಧಾನಗೊಂಡಿದ್ದ ಸಮಾಜವಾದಿ ಪಕ್ಷದ ಸಂಸದ ನರೇಶ್ ಅಗರ್‌ವಾಲ್ ಅವರು ಸೋಮವಾರ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.

ಜಯಾ ಬಚ್ಚನ್ ಅವರನ್ನು ಎಸ್‌ಪಿ ರಾಜ್ಯಸಭೆಗೆ ಮರು ನಾಮಕರಣ ಮಾಡಿದೆ.

‘ಸಿನಿಮಾದಲ್ಲಿ ನೃತ್ಯ ಮಾಡುವವರ ಜೊತೆ ಸಮಾಜವಾದಿ ಪಕ್ಷವು ನನ್ನನ್ನು ಸಮೀಕರಿಸಿದೆ’ ಎಂದು ನರೇಶ್ ಹೇಳಿಕೆ ನೀಡಿದರು. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮುಖಂಡರ ಎದುರೇ ನರೇಶ್ ಅವರು ನೀಡಿದ ಈ ಹೇಳಿಕೆ ಮುಜುಗರ ತಂದಿತು. ನರೇಶ್ ಅವರ ಹೇಳಿಕೆಯನ್ನು ಒಪ್ಪಲಾಗದು ಎಂದು ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಅವರು ನರೇಶ್ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳುವ ಯತ್ನ ಮಾಡಿದರು. ‘ಎಲ್ಲ ಕ್ಷೇತ್ರಗಳ ಜನರನ್ನು ಪಕ್ಷ ಗೌರವಿಸುತ್ತದೆ ಮತ್ತು ಅವರನ್ನು ರಾಜಕೀಯಕ್ಕೆ ಸ್ವಾಗತಿಸುತ್ತದೆ’ ಎಂದು ಸ್ಪಷ್ಟನೆ ನೀಡಿದರು.

ಹಿಂದೂ ದೇವತೆಗಳನ್ನು ಅಣಕಿಸುವ ಹೇಳಿಕೆ ನೀಡಿದ್ದ ಅಗರವಾಲ್ ಕಳೆದ ವರ್ಷ ವಿವಾದ ಸೃಷ್ಟಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry