ಎಸಿಬಿ ದಾಳಿ: ಯಾರ ಆಸ್ತಿ, ಎಷ್ಟು?

ಭಾನುವಾರ, ಮಾರ್ಚ್ 24, 2019
27 °C

ಎಸಿಬಿ ದಾಳಿ: ಯಾರ ಆಸ್ತಿ, ಎಷ್ಟು?

Published:
Updated:
ಎಸಿಬಿ ದಾಳಿ: ಯಾರ ಆಸ್ತಿ, ಎಷ್ಟು?

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದಲ್ಲಿ ಇದೇ 9ರಂದು ರಾಜ್ಯದ ಒಂಬತ್ತು ಸರ್ಕಾರಿ ನೌಕರರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಕೋಟ್ಯಂತರ ವೌಲ್ಯದ ಸ್ಥಿರ, ಚರ ಆಸ್ತಿ, ಚಿನ್ನಾಭರಣ, ವಾಹನ ಹಾಗೂ ಆಸ್ತಿ ದಾಖಲೆ ಜಪ್ತಿ ಮಾಡಿದ್ದರು.

ವಿವಿಧ ಅಧಿಕಾರಿಗಳ  ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಆಸ್ತಿ– ಪಾಸ್ತಿ ವಿವರಗಳನ್ನು ಸೋಮವಾರ ಮಾಧ್ಯಮಗಳಿಗೆ ಎಸಿಬಿ ಬಿಡುಗಡೆ ಮಾಡಿದೆ.

* ಆರ್. ಗಂಗಾಧರ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಘನತಾಜ್ಯ ನಿರ್ವಹಣೆ, ಚಿಕ್ಕಪೇಟೆ ವಿಭಾಗ, ಬಿಬಿಎಂಪಿ, ಬಸವನಗುಡಿ, ಬೆಂಗಳೂರು.

ನಂದಿನಿ ಲೇಔಟ್‌, ಸುಬ್ರಹ್ಮಣ್ಯ ನಗರ, ನಾಗರಬಾವಿಯಲ್ಲಿ ತಲಾ 1 ಮನೆ, ಮಲತ್ತಹಳ್ಳಿ, ಚಿಕ್ಕಲ್ಲಸಂದ್ರ ಗ್ರಾಮದಲ್ಲಿ ತಲಾ 1 ನಿವೇಶನ, ಸಾಸುವೆಘಟ್ಟ ಗ್ರಾಮದಲ್ಲಿ 2 ನಿವೇಶನ. 806.4 ಗ್ರಾಂ ಚಿನ್ನಾಭರಣ, 8 ಕೆ.ಜಿ 202 ಗ್ರಾಂ ಬೆಳ್ಳಿ ವಸ್ತುಗಳು, ಒಂದು ಮಾರುತಿ ವ್ಯಾನ್, 1 ಸ್ವಿಫ್ಟ್‌ ಕಾರು, 1 ಇನ್ನೋವಾ ಕಾರು, 3 ದ್ವಿಚಕ್ರ ವಾಹನ ಮತ್ತು ಬ್ಯಾಂಕ್‌ಗಳಲ್ಲಿ ₹ 12 ಲಕ್ಷ ಠೇವಣಿ. ₹ 58 ಸಾವಿರ ನಗದು ಪತ್ತೆ‌.

* ರಾಜಶ್ರೀ ಜೈನಾಪುರ, ವಿಶೇಷ ಭೂಸ್ವಾಧೀನಾಧಿಕಾರಿ, ಹಿಪ್ಪರಗಿ ಅಣೆಕಟ್ಟು ಯೋಜನೆ, ಅಥಣಿ, ಬೆಳಗಾವಿ.

ವಿಜಯಪುರ, ಬೆಳಗಾವಿಯಲ್ಲಿ ತಲಾ ಒಂದು ಮನೆ, ಧಾರವಾಡದಲ್ಲಿ 2 ಮನೆ, ಹುಬ್ಬಳ್ಳಿಯಲ್ಲಿ ನಿವೇಶನ, ಬಸವನ ಬಾಗೇವಾಡಿಯ ವಿವಿಧೆಡೆ 3.17 ಎಕರೆ ಜಮೀನು. ಇನ್ನೋವಾ ಕಾರು, ಐ-20 ಕಾರು ಹಾಗೂ ದ್ವಿಚಕ್ರ ವಾಹನ ಮತ್ತು 669 ಗ್ರಾಂ ಚಿನ್ನಾಭರಣ, 2 ಕೆ.ಜಿ 876 ಗ್ರಾಂ ಬೆಳ್ಳಿ ವಸ್ತು. ₹ 90 ಸಾವಿರ ನಗದು.

* ವಿನೋದ್ ಕುಮಾರ್, ಅಬಕಾರಿ ಸಬ್ ಇನ್‌ಸ್ಪೆಕ್ಟರ್‌, ಉಡುಪಿ.

ಮಂಗಳೂರಿನಲ್ಲಿ ವಾಸದ ಮನೆ, ನಿವೇಶನ. ಒಂದು ಹೋಂಡಾ ಅಮೇಜ್ ಕಾರು, ದ್ವಿಚಕ್ರ ವಾಹನ, 1 ಕೆ.ಜಿ. 175 ಗ್ರಾಂ ಚಿನ್ನಾಭರಣ, 1 ಕೆ.ಜಿ 533 ಗ್ರಾಂ ಬೆಳ್ಳಿ ವಸ್ತು ಹಾಗೂ 4 ಲಕ್ಷ ವೌಲ್ಯದ ಗೃಹೋಪಯೋಗಿ ವಸ್ತು.

* ಎನ್. ಅಪ್ಪಿ ರೆಡ್ಡಿ, ಸಹಾಯಕ ಎಂಜಿನಿಯರ್‌, ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ, ಶ್ರೀನಿವಾಸಪುರ, ಕೋಲಾರ.

ಶ್ರೀನಿವಾಸಪುರದಲ್ಲಿ ಎರಡು ವಾಸದ ಮನೆ, 3 ನಿವೇಶನ, ವಿವಿಧ ಸರ್ವೇ ನಂಬರ್‌ಗಳಲ್ಲಿ 42.13 ಎಕರೆ ಜಮೀನು. ಸ್ವಿಫ್ಟ್‌ ಕಾರು, 2 ಟ್ರ್ಯಾಕ್ಟರ್, 4 ದ್ವಿಚಕ್ರ ವಾಹನಗಳು, 833 ಗ್ರಾಂ ಚಿನ್ನಾಭರಣ, 3 ಕೆ.ಜಿ 641 ಗ್ರಾಂ ಬೆಳ್ಳಿ ವಸ್ತುಗಳು, ವಿವಿಧ ಬ್ಯಾಂಕ್ ಖಾತೆಗಳಲ್ಲಿ ₹ 1.88 ಲಕ್ಷ ಠೇವಣಿ. ₹ 1,95,450 ನಗದು ಪತ್ತೆ.

* ಎ.ಪಿ. ಶಿವಕುಮಾರ್, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಕಡೂರು.

ತುಮಕೂರು, ತಿಪಟೂರಿನಲ್ಲಿ ತಲಾ 1 ಮನೆ ಹಾಗೂ ನಿರ್ಮಾಣ ಹಂತದ ಕಟ್ಟಡ. ವಿವಿಧ ಸ್ಥಳಗಳಲ್ಲಿ ನಾಲ್ಕು ನಿವೇಶನ, ಮಾದಿಹಳ್ಳಿ ಬಡಾವಣೆಯಲ್ಲಿ ನಿವೇಶನ. ಎರಡು ದ್ವಿಚಕ್ರ ವಾಹನ, ಹುಂಡೈ ಆಸ್ಟ್ರಾ ಕಾರು, 297 ಗ್ರಾಂ ಚಿನ್ನಾಭರಣ, 1 ಕೆ.ಜಿ 43 ಗ್ರಾಂ ಬೆಳ್ಳಿ ವಸ್ತು. ಬ್ಯಾಂಕ್ ಖಾತೆಯಲ್ಲಿ ₹ 49,25,000. ₹ 6.5 ಲಕ್ಷ ವೌಲ್ಯದ ಗೃಹ ಬಳಕೆ ವಸ್ತು, ₹ 36,92,900 ನಗದು ಪತ್ತೆ.

* ಡಾ. ರಘುನಾಥ, ವೈದ್ಯಕೀಯ ಅಧಿಕಾರಿ, ಬಣವಾಡಿ, ಮಾಗಡಿ ತಾಲ್ಲೂಕು, ರಾಮನಗರ

ಗಂಗಾವತಿಯಲ್ಲಿ ಎರಡು ಮನೆ, ತುಮಕೂರು, ರಾಮನಗರದಲ್ಲಿ ತಲಾ 1 ಮನೆ ಹಾಗೂ ವಿವಿಧ ಸರ್ವೇ ನಂಬರ್‌ಗಳಲ್ಲಿ 4 ಎಕರೆ ಜಮೀನು, ಸ್ವಿಫ್ಟ್‌ ಡಿಸೈರ್ ಕಾರು, ವರ್ನಾ ಕಾರು, ದ್ವಿಚಕ್ರ ವಾಹನ, ಬುಲೆಟ್ ಬೈಕ್, 298 ಗ್ರಾಂ ಚಿನ್ನಾಭರಣ, 250 ಗ್ರಾಂ ಬೆಳ್ಳಿ ವಸ್ತು, ₹ 15 ಲಕ್ಷ ಮೌಲ್ಯದ ಗೃಹ ಬಳಕೆ ವಸ್ತು. ₹ 2,28,400  ನಗದು ಪತ್ತೆಯಾಗಿದೆ.

* ರುದ್ರಪ್ರಸಾದ್, ಅಧೀಕ್ಷಕರು, ಕೆ.ಜಿ.ಐ.ಡಿ, ಬೆಂಗಳೂರು.

ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ, 731.21 ಗ್ರಾಂ ಚಿನ್ನಾಭರಣ, 865.2 ಗ್ರಾಂ ಬೆಳ್ಳಿ ವಸ್ತುಗಳು. ಪತ್ನಿ ಹೆಸರಿನಲ್ಲಿ ಬ್ಯಾಂಕ್ ಖಾತೆಗಳಲ್ಲಿ ₹ 10 ಲಕ್ಷ ಠೇವಣಿ.

* ಕೆ.ಸಿ ವಿರೂಪಾಕ್ಷ, ಎಸ್.ಡಿ.ಎ, ಆರ್‌ಟಿಓ ಕಚೇರಿ, ಚಿಕ್ಕಮಗಳೂರು.

ಹೊಳೆನರಸೀಪುರದಲ್ಲಿ ಎರಡು ಮನೆ, ಹಾಸನ ನಗರದಲ್ಲಿ ನಿವೇಶನ, ಹೊಳೆನರಸೀಪುರ ತಾಲ್ಲೂಕಿನಲ್ಲಿ 3.20 ಎಕರೆ ಜಮೀನು. ಮಾರುತಿ ಕಾರು, 2 ದ್ವಿಚಕ್ರ ವಾಹನ, 173 ಗ್ರಾಂ ಚಿನ್ನಾಭರಣ, 350 ಗ್ರಾಂ ಬೆಳ್ಳಿ ವಸ್ತುಗಳು. ₹ 9.5 ಲಕ್ಷ ವೌಲ್ಯದ ಗೃಹ ಬಳಕೆ ವಸ್ತುಗಳು.

ಸಹಾಯಕ ಎಂಜಿನಿಯರ್‌ ಏಳು ಫ್ಲ್ಯಾಟ್‌ಗಳ ಒಡೆಯ!

ಗಂಗಾವತಿಯಲ್ಲಿ ಗ್ರಾಮೀಣ ಕುಡಿಯುವ ನೀರು ಉಪ ವಿಭಾಗದಲ್ಲಿ ಸಹಾಯಕ ಎಂಜಿನಿಯರ್‌ ಆಗಿರುವ ಪಿ. ವಿಜಯಕುಮಾರ್ ಏಳು ಫ್ಲ್ಯಾಟ್‌ಗಳನ್ನು ಹೊಂದಿರುವುದು ದಾಳಿ ವೇಳೆ ಪತ್ತೆಯಾಗಿದೆ. ಅವರು ಪಂಚಾಯತ್‌ರಾಜ್ ಎಂಜಿನಿಯರಿಂಗ್ ಘಟಕದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಪ್ರಭಾರ) ಹುದ್ದೆಯನ್ನೂ ನಿರ್ವಹಿಸುತ್ತಿದ್ದಾರೆ.

ಆಸ್ತಿ ವಿವರ:

ಹೈದರಾಬಾದ್‌ನಲ್ಲಿ ಐದು ಫ್ಲ್ಯಾಟ್, ಬೆಂಗಳೂರಿನಲ್ಲಿ 2 ಫ್ಲ್ಯಾಟ್, ಗಂಗಾವತಿಯಲ್ಲಿ ವಿವಿಧ ಸರ್ವೇ ನಂಬರ್‌ನಲ್ಲಿ 4.24 ಎಕರೆ ಜಮೀನು, ಫಾರ್ಚ್ಯೂನರ್ ಕಾರು, ಇಟಿಯೋಸ್ ಕಾರು ಹಾಗೂ ದ್ವಿಚಕ್ರ ವಾಹನ ಮತ್ತು 1 ಕೆ.ಜಿ. 670 ಗ್ರಾಂ ಚಿನ್ನಾಭರಣ, ರೋಲೆಕ್ಸ್ ವಾಚ್, ₹ 12.30 ಲಕ್ಷ ವೌಲ್ಯದ ಗೃಹೋಪಯೋಗಿ ವಸ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry