ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಪಂದ್ಯಗಳ ಚೆಂಡು ಬದಲು?

Last Updated 12 ಮಾರ್ಚ್ 2018, 19:44 IST
ಅಕ್ಷರ ಗಾತ್ರ

ನವದೆಹಲಿ : ಭಾರತದಲ್ಲಿ ನಡೆಯುವ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ ಪಂದ್ಯಗಳಲ್ಲಿ ಹೊಸ ಬಗೆಯ ಚೆಂಡು ಬಳಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಾಗಿದೆ.

ಮುಂಬೈಯಲ್ಲಿ ನಡೆದ ದೇಶಿ ಕ್ರಿಕೆಟ್‌ನ ಕೋಚ್‌ಗಳು ಮತ್ತು ನಾಯ ಕರ ಸಮಾವೇಶದಲ್ಲಿ ಈ ಕುರಿತು ಚರ್ಚಿಸಲಾಗಿದ್ದು ಈಗ ಬಳಸುತ್ತಿರುವ ಕುಕ ಬುರ ಚೆಂಡಿನ ಬದಲು ‘ಎಸ್‌ಜಿ ವೈಟ್‌’ ಚೆಂಡು ಬಳಸಲು ನಿರ್ಧರಿಸಲಾಗಿದೆ.

ಭಾರತದಲ್ಲಿ ಪ್ರಥಮ ದರ್ಜೆ ಮತ್ತು ಟೆಸ್ಟ್ ಪಂದ್ಯಗಳಿಗೆ ‘ಎಸ್‌ಜಿ ಟೆಸ್ಟ್’ ಚೆಂಡು ಬಳಸಲಾಗುತ್ತದೆ. ಈ ಬಾರಿ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಮತ್ತು ವಿಜಯ್‌ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಈ ಚೆಂಡನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು. ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ಈ ಚೆಂಡು ಬಳಸಿದ ಆಟಗಾರರಿಂದ ಉತ್ತಮ ಪ್ರತಿಕ್ರಿಯೆ ಬರಲಿಲ್ಲ. ವಿಜಯ್ ಹಜಾರೆಯಲ್ಲಿ ಆಡಿದವರು ಬಿಸಿಸಿಐ ಪ್ರಯೋಗಕ್ಕೆ ಮೆಚ್ಚುಗೆ ಸೂಚಿಸಿದ್ದರು.

‘ಹೊಸ ಚೆಂಡಿನ ಬಳಕೆ ಬಗ್ಗೆ ಬಿಸಿಸಿಐ ಮುಖ್ಯ ವ್ಯವಸ್ಥಾಪಕ ಸಾಬಾ ಕರೀಂ ಜೊತೆ ಚರ್ಚಿಸಲಾಗಿದ್ದು ಮುಂದಿನ ಬಾರಿ ಭಾರತ ತಂಡ ಇಲ್ಲಿ ಆಡುವ ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳಲ್ಲಿ ಈ ಚೆಂಡನ್ನು ಬಳಸಲಿದ್ದಾರೆ’ ಎಂದು ಹಿರಿಯ ಕೋಚ್ ಒಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT