ಪ್ಯಾರಾಲಿಂಪಿಕ್ಸ್‌; ಚಿನ್ನ ಗೆದ್ದ ಬಿಬಿಯನ್‌

7

ಪ್ಯಾರಾಲಿಂಪಿಕ್ಸ್‌; ಚಿನ್ನ ಗೆದ್ದ ಬಿಬಿಯನ್‌

Published:
Updated:
ಪ್ಯಾರಾಲಿಂಪಿಕ್ಸ್‌; ಚಿನ್ನ ಗೆದ್ದ ಬಿಬಿಯನ್‌

ಪೈವೊಂಗ್‌ಚಾಂಗ್‌, ದಕ್ಷಿಣ ಕೊರಿಯಾ : ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನೆದರ್ಲೆಂಡ್ಸ್‌ ಸ್ಪರ್ಧಿ ಬಿಬಿಯನ್ ಸ್ಪೀ ಇತ್ತೀಚೆಗಷ್ಟೇ ಎರಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಳಿಗಾಲದ ಪ್ಯಾರಾಲಿಂಪಿಕ್ಸ್‌ನಲ್ಲಿ ಅವರು ಸೋಮವಾರ ಚಿನ್ನ ಗೆದ್ದು ಅಚ್ಚರಿ ಮೂಡಿಸಿದ್ದಾರೆ.

ಮಹಿಳೆಯರ ಸ್ನೋ ಬೋರ್ಡರ್‌ ವಿಭಾಗದ ಅಂತಿಮ ಸುತ್ತಿನಲ್ಲಿ ಸ್ಪೀ ನೆದರ್ಲೆಂಡ್ಸ್‌ನವರೇ ಆದ ಲಿಸಾ ಅವರನ್ನು ಮಣಿಸಿದರು. ಸ್ಪೀ ಅವರ ಕುತ್ತಿಗೆಯಲ್ಲಿ ಗಡ್ಡೆ ಬೆಳೆದಿದ್ದ ಕಾರಣ ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಎರಡು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

‘ಹಿಂದಿನ ಕೆಲವು ದಿನಗಳಿಂದ ನಾನು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಈಗ ಚಿನ್ನ ಗೆದ್ದ ಸಂಭ್ರಮ ನನ್ನ ಎಲ್ಲಾ ನೋವನ್ನು ಮರೆಸಿದೆ’ ಎಂದು 45 ವರ್ಷದ ಸ್ಪೀ ಹೇಳಿದ್ದಾರೆ.

ಮೂಳೆ ಕ್ಯಾನ್ಸರ್‌ನಿಂದಾಗಿ ಅವರು 2001ರಲ್ಲಿ ತಮ್ಮ ಒಂದು ಕಾಲು ಕಳೆದುಕೊಂಡಿದ್ದರು. 2014ರಲ್ಲಿ ಸೋಚಿಯಲ್ಲಿ ನಡೆದ ಚಳಿಗಾಲದ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಸ್ಪರ್ಧೆ ಒಡ್ಡುವ ಮೂಲಕ ಚಿನ್ನ ಗೆದ್ದಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾದ ಮೂರು ವಾರಗಳ ಬಳಿಕ ಅವರು ಅಭ್ಯಾಸ ಆರಂಭಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry