ಟೆಕ್‌ ಹಬ್–ಸ್ವಚ್ಛತಾ ಅಭಿಯಾನ

7

ಟೆಕ್‌ ಹಬ್–ಸ್ವಚ್ಛತಾ ಅಭಿಯಾನ

Published:
Updated:
ಟೆಕ್‌ ಹಬ್–ಸ್ವಚ್ಛತಾ ಅಭಿಯಾನ

ಬೆಂಗಳೂರು: ‘ದಿ ಅಗ್ಲಿ ಇಂಡಿಯನ್ಸ್‌’ ಹಾಗೂ ಎಂಬಸಿ ಗ್ರೂಪ್‌ ಸಹಯೋಗದಲ್ಲಿ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನದ ಭಾಗವಾಗಿ ದೊಮ್ಮಲೂರು ಟೆಕ್ ಹಬ್‌ ಸುತ್ತಮುತ್ತಲ ಸ್ಥಳಗಳನ್ನು ಸ್ವಯಂಸೇವಕರು ಸ್ವಚ್ಛಗೊಳಿಸಿದರು.

58 ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಅಂದಗೆಟ್ಟಿದ್ದ ಸಾರ್ವಜನಿಕ ಸ್ಥಳಗಳ ಗೋಡೆಗಳಿಗೆ ಬಣ್ಣ ಬಳಿದು ಹೊಸ ರೂಪ ನೀಡಲಾಯಿತು.

ಸ್ವಿಸ್ ರೇ, ಟಾರ್ಗೆಟ್‍ನ ಸ್ವಯಂ ಸೇವಕರು ಹಾಗೂ ಸ್ಥಳೀಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಎಂಬಸಿಯ ಸಮುದಾಯ ವಿಸ್ತರಣಾ ಕಾರ್ಯಕ್ರಮದ ಮುಖ್ಯಸ್ಥರಾದ ಶೈನಾ ಗಣಪತಿ, ‘ಸಮುದಾಯದ ಅಭಿವೃದ್ಧಿಗೆ ಕಂಪನಿ ನಿರಂತರವಾಗಿ ಶ್ರಮಿಸುತ್ತಿದೆ. ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕ ಸ್ಥಳಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದೆ’ ಎಂದರು.

‘ಬ್ಯುಸಿನೆಸ್ ಪಾರ್ಕ್‌ ಸುತ್ತಲಿನ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಕಂಪನಿಯು ದೀರ್ಘಾವಧಿ ಯೋಜನೆ ರೂಪಿಸಿದೆ. ನಗರದ 17 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವು ನೀಡಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry