ಮಕ್ಕಳಲ್ಲಿ ಪರೋಪಕಾರ ಗುಣ ಬೆಳೆಸಿ

7
ಬಾಲ ವಿಕಾಸ ಅಕಾಡೆಮಿ ಮಾಜಿ ಸದಸ್ಯ ಚಂದ್ರಪ್ಪ ಹೆಬ್ಬಾಳಕರ್ ಸಲಹೆ

ಮಕ್ಕಳಲ್ಲಿ ಪರೋಪಕಾರ ಗುಣ ಬೆಳೆಸಿ

Published:
Updated:
ಮಕ್ಕಳಲ್ಲಿ ಪರೋಪಕಾರ ಗುಣ ಬೆಳೆಸಿ

ಬೀದರ್‌: ‘ಮಕ್ಕಳಲ್ಲಿ ಉತ್ತಮ ವಿಚಾರಧಾರೆಗಳನ್ನು ತುಂಬಲು ಚಿಂತನ ಮಂಥನ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಬೇಕು’ ಎಂದು ಬಾಲ ವಿಕಾಸ ಅಕಾಡೆಮಿ ಮಾಜಿ ಸದಸ್ಯ ಚಂದ್ರಪ್ಪ ಹೆಬ್ಬಾಳಕರ್ ತಿಳಿಸಿದರು.

ನಗರದ ಮೈಲೂರಿನ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಷ್ಟದಲ್ಲಿರುವವರಿಗೆ ನೆರವಾಗು ವುದನ್ನು ಮಕ್ಕಳಿಗೆ ಹೇಳಿ ಕೊಡಬೇಕು. ಮಕ್ಕಳಲ್ಲಿ ಪರೋಪಕಾರ ಗುಣಗಳನ್ನು ಬೆಳೆಸಬೇಕು’ ಎಂದು ಹೇಳಿದರು.

ಅಕಾಡೆಮಿಯ ಸದಸ್ಯ ಮಹೇಶ ಗೋರನಾಳಕರ್ ಮಾತನಾಡಿ, ‘ಬಾಲವಿಕಾಸ ಅಕಾಡೆಮಿಯಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮಕ್ಕಳ ಹಬ್ಬ, ಬೇಸಿಗೆ ಶಿಬಿರ, ವ್ಯಕ್ತಿತ್ವ ವಿಕಸನ ಶಿಬಿರ, ಪರೀಕ್ಷೆ ಸಿದ್ಧತೆ ಕುರಿತು ತರಬೇತಿ ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಶಾಮರಾವ್ ನೆಲವಾಡೆ ಮಾತನಾಡಿ, ‘ಪ್ರತಿಯೊಬ್ಬರು ಬಾಲ್ಯದಲ್ಲೇ ಚಿತ್ರಕಲೆ, ನಾಟಕ, ನೃತ್ಯ, ಸಂಗೀತ, ಮಣ್ಣಿನ ಕಲೆ ಬಗೆಗೆ ತಿಳಿದುಕೊಳ್ಳಬೇಕು

ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಧನಲಕ್ಷ್ಮಿ ಪಾಟೀಲ ಮಾತನಾಡಿ, ‘ಮಕ್ಕಳು ತಮ್ಮ ಜೀವನದಲ್ಲಿ ಉತ್ತಮ ನಡೆ-ನುಡಿ, ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಸರ್ಕಾರಿ ಬಾಲಕರ ಬಾಲ ಮಂದಿರದ ಅಧೀಕ್ಷಕ ಶ್ರೀನಿವಾಸ ಬಾಳುವಾಲೆ ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸ್ವಾಮಿದಾಸ ಬೇಂದ್ರೆ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಸ್ಟಿವನ್, ಮಂಜುಳಾ ಎಂ, ಮಾನವ ಬಂಧುತ್ವ ವೇದಿಕೆಯ ಮಹಿಳಾ ಘಟಕದ ಮುಖ್ಯಸ್ಥೆ ಶಾರದಾ, ಸರ್ಕಾರಿ ಬಾಲಕರ ಬಾಲಮಂದಿರದ ಉಪ ಅಧೀಕ್ಷಕ ಮಂಜೂರಖಾನ್, ಆಖೀಬ್ ಜಾವೇದ್, ಆಕಾಶ ಡಿ, ಅಭಿಲಾಶ ಇದ್ದರು.

ಸರ್ಕಾರಿ ಬಾಲಕರ ಬಾಲಮಂದಿರದ ಆಪ್ತ ಸಮಾಲೋಚಕ ಸುಧಾಕರ ಎಲ್ಲಾನೋರ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry