ಯರಬಳ್ಳಿ ಗ್ರಾ.ಪಂ ಕಚೇರಿಗೆ ಬೆಂಕಿ: ದಾಖಲೆಗಳು ಭಸ್ಮ

ಸೋಮವಾರ, ಮಾರ್ಚ್ 25, 2019
24 °C

ಯರಬಳ್ಳಿ ಗ್ರಾ.ಪಂ ಕಚೇರಿಗೆ ಬೆಂಕಿ: ದಾಖಲೆಗಳು ಭಸ್ಮ

Published:
Updated:
ಯರಬಳ್ಳಿ ಗ್ರಾ.ಪಂ ಕಚೇರಿಗೆ ಬೆಂಕಿ: ದಾಖಲೆಗಳು ಭಸ್ಮ

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗ್ರಾಮ ಪಂಚಾಯ್ತಿ ಕಚೇರಿಗೆ ಮಂಗಳವಾರ ಬೆಂಕಿ ಬಿದ್ದಿದ್ದು ಅನೇಕ ಕಡತಗಳು ಸುಟ್ಟು ಹೋಗಿವೆ.

ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ. ಹಲವು ಪ್ರಮುಖ ದಾಖಲೆಗಳು ಬೆಂಕಿಗೆ ಸುಟ್ಟು ಭಸ್ಮವಾಗಿವೆ.

ಈ ಹಿಂದೆಯೂ ಒಮ್ಮೆ ಗ್ರಾಮ ಪಂಚಾಯತಿ ಕಟ್ಟಡದ ಒಳ ಭಾಗಕ್ಕೆ ಬೆಂಕಿ ಬಿದ್ದು ದಾಖಲೆಗಳು ಸುಟ್ಟು ಹೋಗಿದ್ದವು.

ಘಟನೆಯಿಂದಾಗಿ ಗ್ರಾಮ ಪಂಚಾಯಯ್ತಿ ಸದಸ್ಯರು ಆತಂಕಗೊಂಡಿದ್ದಾರೆ.

ಈ ಗ್ರಾಮ ಪಂಚಾಯ್ತಿಯಲ್ಲಿ ಅಕ್ರಮ ನಡೆದಿರುವ ಕುರಿತು ದೂರುಗಳು ಕೇಳಿಬರುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸದ್ಯ ಸ್ಥಳಕ್ಕೆ ಐಮಂಗಲ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry