ಮಹದೇವಪ್ಪ ತಿರುಮಣಿ ಪಂಚಾಯಿತಿ ಅಧ್ಯಕ್ಷ

7

ಮಹದೇವಪ್ಪ ತಿರುಮಣಿ ಪಂಚಾಯಿತಿ ಅಧ್ಯಕ್ಷ

Published:
Updated:

ಗುಡಿಬಂಡೆ: ತಿರುಮಣಿ ಗ್ರಾಮ ಪಂಚಾ ಯಿತಿ ಅಧ್ಯಕ್ಷರಾಗಿ ಸಿಪಿಎಂ ಬೆಂಬಲಿತ ಮಹದೇವಪ್ಪ ಆಯ್ಕೆಯಾದರು.

ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಬೆಂಬಲಿತರ ನಡುವೆ ಜಿದ್ದಾ ಜಿದ್ದಿ ಇತ್ತು. 17 ಸದಸ್ಯರು ಇದ್ದು ಚುನಾವಣೆಯಲ್ಲಿ 15 ಮಂದಿ ಹಾಜರಿದ್ದರು. ಕಾಂಗ್ರೆಸ್‌ ಬೆಂಬಲಿತರಾಗಿ ಸ್ಪರ್ಧಿಸಿದ್ದ ನರಸಮ್ಮ ಅವರಿಗೆ 7 ಮತ್ತು ಮಹದೇವಪ್ಪ ಅವರಿಗೆ 8 ಸದಸ್ಯರು ಬೆಂಬಲ ಸೂಚಿಸಿದರು. ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಮುನಿರಾಜು ಚುನಾ ವಣಾಧಿಕಾರಿಯಾಗಿದ್ದರು.

ನರಸಮ್ಮ 9 ಸದಸ್ಯರನ್ನು ಒಂದು ವಾರ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ನೇರವಾಗಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಈ ಸದಸ್ಯರು ಬಂದರು. ಕಾಂಗ್ರೆಸ್ ಬೆಂಬಲಿಗರೇ ಅಧ್ಯಕ್ಷರಾಗುವರು ಎನ್ನುವ ವಿಶ್ವಾಸ ಇತ್ತು. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸಿಪಿಎಂ ಬೆಂಬಲಿತ ಅಭ್ಯರ್ಥಿಯ ಪರ ಮತ ಚಲಾಯಿಸಿದರು.

ಮಹಾದೇವಪ್ಪ ಗೆಲುವು ಸಾಧಿಸಿದ ತಕ್ಷಣ ಸಿಪಿಎಂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry