ಮಾಸ್ಟರ್ಸ್ ಅಥ್ಲೆಟಿಕ್ಸ್‌: 86ರ ಅಜ್ಜನಿಗೆ 3 ಚಿನ್ನ

7

ಮಾಸ್ಟರ್ಸ್ ಅಥ್ಲೆಟಿಕ್ಸ್‌: 86ರ ಅಜ್ಜನಿಗೆ 3 ಚಿನ್ನ

Published:
Updated:
ಮಾಸ್ಟರ್ಸ್ ಅಥ್ಲೆಟಿಕ್ಸ್‌: 86ರ ಅಜ್ಜನಿಗೆ 3 ಚಿನ್ನ

ಭದ್ರಾವತಿ: ನಗರದ ಹಿರಿಯಜ್ಜ ಕಿರಿಯರನ್ನು ನಾಚಿಸುವ ರೀತಿಯಲ್ಲಿ ಮ್ಯಾರಥಾನ್ ಸ್ಪರ್ಧೆಯಲ್ಲಿ ಹಲವು ಸಾಧನೆ ಮಾಡಿದ್ದಾರೆ.

ಎಚ್. ರಾಮೇಗೌಡ (86) ಹೊಸಕೋಟೆ ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ನೇತೃತ್ವದಲ್ಲಿ ಹೊಸಕೋಟೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅವರು 200 ಮೀ ಓಟದಲ್ಲಿ, ಡಿಸ್ಕಸ್ ಹಾಗೂ ಶಾಟ್‌ಪಟ್‌ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಇಲ್ಲಿ ತನಕ 218 ಪಂದ್ಯಗಳಲ್ಲಿ ಭಾಗವಹಿಸಿರುವ ರಾಮೇಗೌಡ 173 ಬಾರಿ ಪ್ರಥಮ ಸ್ಥಾನವನ್ನು ಪಡೆದ ಕೀರ್ತಿಗೆ ಭಾಜನರಾಗಿದ್ದಾರೆ. ಹಿರಿಯರ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ದೇಶ, ವಿದೇಶಗಳಲ್ಲಿ ಸಾಕಷ್ಟು ಪದಕ ಪಡೆದಿರುವ ಇವರು ರಾಷ್ಟ್ರದಲ್ಲಿ ಈ ವಿಭಾಗದಲ್ಲಿ ಹೆಚ್ಚು ಪದಕ ವಿಜೇತರಾದ ಕೀರ್ತಿಗೂ ಪಾತ್ರರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry