ಕನಿಷ್ಠ ಮೊತ್ತ ಇರದ ಉಳಿತಾಯ ಖಾತೆ ಮೇಲಿನ ಮಾಸಿಕ ಶುಲ್ಕ ಶೇ 75ರಷ್ಟು ಇಳಿಕೆ: ಎಸ್‌ಬಿಐ

7

ಕನಿಷ್ಠ ಮೊತ್ತ ಇರದ ಉಳಿತಾಯ ಖಾತೆ ಮೇಲಿನ ಮಾಸಿಕ ಶುಲ್ಕ ಶೇ 75ರಷ್ಟು ಇಳಿಕೆ: ಎಸ್‌ಬಿಐ

Published:
Updated:
ಕನಿಷ್ಠ ಮೊತ್ತ ಇರದ ಉಳಿತಾಯ ಖಾತೆ ಮೇಲಿನ ಮಾಸಿಕ ಶುಲ್ಕ ಶೇ 75ರಷ್ಟು ಇಳಿಕೆ: ಎಸ್‌ಬಿಐ

ಮುಂಬೈ: ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ)ನ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಹೊಂದಿರದ ಖಾತೆಗಳಿಗೆ ವಿಧಿಸುತ್ತಿದ್ದ ದಂಡದ ಮೊತ್ತವನ್ನು ಶೇ 75ರಷ್ಟು ಇಳಿಕೆ ಮಾಡಿರುವುದಾಗಿ ಮಂಗಳವಾರ ಪ್ರಕಟಿಸಿದೆ.

ಮಹಾನಗರ ಹಾಗೂ ನಗರ ಕೇಂದ್ರಗಳಲ್ಲಿನ ಎಸ್‌ಬಿಐ ಖಾತೆಗಳಲ್ಲಿ ತಿಂಗಳ ಸರಾಸರಿ ಕನಿಷ್ಠ ಮೊತ್ತ ಕಾಯ್ಡುಕೊಂಡಿರದ ಖಾತೆಗಳಿಗೆ ವಿಧಿಸುತ್ತಿದ್ದ ಶುಲ್ಕವನ್ನು ₹15ಕ್ಕೆ ಇಳಿಸಿದೆ. ಈ ಹಿಂದೆ ₹50 ಮತ್ತು ಜಿಎಸ್‌ಟಿ ವಿಧಿಸುತ್ತಿದ್ದ ಬ್ಯಾಂಕ್‌ ₹15ರ ಜತೆಗೆ ಜಿಎಸ್‌ಟಿ ನಿಗದಿ ಪಡಿಸಿದೆ. ಇದರಿಂದ 25 ಕೋಟಿ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದಿದೆ.

ಉಪನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಜಿಎಸ್‌ಟಿಯೊಂದಿಗೆ ಕ್ರಮವಾಗಿ ₹12 ಮತ್ತು ₹10 ನಿಗದಿ ಪಡಿಸಿದೆ. ಈವರೆಗೂ ₹40ರ ಜತೆಗೆ ಜಿಎಸ್‌ಟಿ ವಿಧಿಸುತ್ತಿತ್ತು. ಏಪ್ರಿಲ್‌ 1ರಿಂದ ಹೊಸ ಶುಲ್ಕ ಅನ್ವಯವಾಗಲಿದೆ.

ಗ್ರಾಹಕರ ಪ್ರತಿಕ್ರಿಯೆ ಹಾಗೂ ಅವರ ಭಾವನೆಗಳನ್ನು ಪರಿಗಣಿಸಿ ಶುಲ್ಕ ಇಳಿಕೆ ಮಾಡಲಾಗಿದೆ ಎಂದು ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಗುಪ್ತಾ ಹೇಳಿದ್ದಾರೆ.

ಸಾಮಾನ್ಯ ಉಳಿತಾಯ ಖಾತೆಗಳನ್ನು ಮೂಲ ಉಳಿತಾಯ ಠೇವಣಿ ಖಾತೆ(ಬಿಎಸ್‌ಬಿಡಿ)ಯಾಗಿ ಪರಿವರ್ತಿಸಿಕೊಳ್ಳುವ ಆಯ್ಕೆ ನೀಡಿದೆ. ಬಿಎಸ್‌ಬಿಡಿಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದಿದ್ದರೂ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.

ಎಸ್‌ಬಿಐ ಒಟ್ಟು 41 ಕೋಟಿ ಉಳಿತಾಯ ಖಾತೆಗಳನ್ನು ಹೊಂದಿದ್ದು, ಇದರಲ್ಲಿ ಪ್ರಧಾನ ಮಂತ್ರಿ ಜನ ಧನ್ ಯೋಜನಾ, ಬಿಎಸ್‌ಬಿಡಿ, ಪಿಂಚಣಿ ಸೇರಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದ 16 ಕೋಟಿ ಖಾತೆಗಳಿಗೆ ಶುಲ್ಕ ವಿಧಿಸುವುದರಿಂದ ವಿನಾಯತಿ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry