ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಂ ಎನ್ನಲಿ ಮನೆ

Last Updated 13 ಮಾರ್ಚ್ 2018, 19:30 IST
ಅಕ್ಷರ ಗಾತ್ರ

* ಹತ್ತು ಹನಿ ಕಿತ್ತಳೆ ಎಣ್ಣೆ ಮತ್ತು ಎಂಟು ಹನಿ ಪುದೀನಾ ಎಣ್ಣೆಯನ್ನು ಸೇರಿಸಿ ಸ್ಪ್ರೇ ಬಾಟಲಿಗೆ ಹಾಕಿ ಆಗಾಗ್ಗೆ ಮನೆ ಪೂರ್ತಿ ಸಿಂಪಡಿಸಿ.

* ರಸ ಹಿಂಡಿದ ನಿಂಬೆಹಣ್ಣಿನ ಸಿಪ್ಪೆಯನ್ನು ಉಲ್ಟಾ ಮಾಡಿ ಅದರೊಳಗೆ ಬತ್ತಿ ಹಾಕಿ ದೀಪ ಹಚ್ಚುವುದರಿಂದ ಮನೆಯಲ್ಲಿ ಪರಿಮಳ ತುಂಬುತ್ತದೆ.

* ರೋಸ್‌ಮೆರ‍್ರಿ, ಒಂದು ನಿಂಬೆಹಣ್ಣು, ವೆನಿಲಾ ಎಕ್ಸ್‌ಟ್ರಾಕ್ಟ್‌ ಅನ್ನು ಚಿಕ್ಕ ಪಾತ್ರೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಕಾಯಿಸಿ. ಇದನ್ನು ಬಾಟಲಿಯನ್ನು ಹಾಕಿ ಮನೆಯಲ್ಲಿ ಇರಿಸಿ. ಮೂರು ದಿನಗಳ ನಂತರ ಇದರ ಪರಿಮಳ ಬದಲಾಗುತ್ತದೆ. ಹಾಗಾಗಿ ಎರಡು, ಮೂರು ದಿನಗಳವರೆಗೆ ಮಾತ್ರವೇ ಇದನ್ನು ಬಳಸಿ.

* ನಿಂಬೆಹಣ್ಣು, ಪುದೀನಾ, ಶ್ರೀಗಂಧದ ಪುಡಿಯನ್ನು ಕಡಿಮೆ ಉರಿಯಲ್ಲಿ ಕಾಯಿಸಿ. ಇದಕ್ಕೆ ಬೇಕಿಂಗ್‌ ಸೋಡಾ ಮಿಶ್ರಣ ಮಾಡಿ. ತಣ್ಣಗಾದ ಮೇಲೆ ಈ ನೀರನ್ನು ಸೋಸಿ ಮನೆ ಪೂರ್ತಿ ಚಿಮುಕಿಸಿ.

* ಉಗುರು ಬೆಚ್ಚಗಿನ ನೀರಿಗೆ ಕಂಫರ್ಟ್‌ ಮತ್ತು ಬೇಕಿಂಗ್‌ ಸೋಡಾ ಸೇರಿಸಿ. ಇದನ್ನು ಫ್ರೆಶ್ನರ್‌ ರೀತಿ ಬಳಸಬಹುದು.

* ನಿಂಬೆಹಣ್ಣನ್ನು ಹೋಳುಗಳನ್ನಾಗಿ ಮಾಡಿ. ಇದಕ್ಕೆ ಚಕ್ಕೆ, ಲವಂಗ ಸೇರಿಸಿ ಬಿಸಿ ಮಾಡಿ. ಇದನ್ನು ಒಂದು ಬಾಟಲಿಗೆ ಹಾಕಿ ಕೋಣೆಯೊಳಗೆ ಇಡಿ. ಉತ್ತಮ ಪರಿಮಳ ಅನುಭವಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT