ರಣವೀರ್‌ ಜೊತೆ ಪ್ರಿಯಾ

7

ರಣವೀರ್‌ ಜೊತೆ ಪ್ರಿಯಾ

Published:
Updated:
ರಣವೀರ್‌ ಜೊತೆ ಪ್ರಿಯಾ

ಹಾಡೊಂದರಲ್ಲಿ ಕಣ್ಣು ಹೊಡೆಯುವ ದೃಶ್ಯದ ಮೂಲಕ ಸಿನಿ ಪ್ರೇಮಿಗಳ ಮನದಲ್ಲಿ ಜಾಗ ಗಿಟ್ಟಿಸಿಕೊಂಡವರು ಪ್ರಿಯಾ ಪ್ರಕಾಶ್‌ ವಾರಿಯರ್‌. ರಾತ್ರಿ ಕಳೆದು ಬೆಳಗಾಗುವುದರೊಳಗೆ ಪ್ರಿಯಾ ಕನಸಿನ ರಾಣಿಯಾಗಿ ಮೆರೆದರು. ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಎಲ್ಲೇ ನೋಡಿ ಪ್ರಿಯಾ ಅವರದ್ದೇ ಸುದ್ದಿ.

ಈ ಚೆಲುವೆಯ ಕುರಿತು ಸಿನಿಮಾ ಗಲ್ಲಿಯಲ್ಲಿ ಇನ್ನೊಂದು ಸುದ್ದಿ ಸ್ಫೋಟಗೊಂಡಿದೆ. ಅದು ಪ್ರಿಯಾ ಅವರಿಗೆ ಬಾಲಿವುಡ್‌ನಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ ಎಂಬುದು. ಇದಕ್ಕೂ ಮುಖ್ಯ ವಿಷಯ ಎಂದರೆ ಪ್ರಿಯಾ ಅವರಿಗೆ ಜೊತೆಯಾಗುತ್ತಿರುವುದು ನಟ ರಣವೀರ್‌ ಸಿಂಗ್‌.

ಈ ಗುಸುಗುಸು ನಿಜವೇ ಆಗಿದ್ದಲ್ಲಿ ರೋಹಿತ್‌ ಶೆಟ್ಟಿ ನಿರ್ದೇಶನದ ‘ಸಿಂಬಾ’ ಚಿತ್ರದ ಮೂಲಕ ಪ್ರಿಯಾ ಬಾಲಿವುಡ್‌ ಅಂಗಳದಲ್ಲಿ ಹೆಜ್ಜೆ ಊರುತ್ತಾರೆ. ಪೊಲೀಸ್‌ ಪಾತ್ರದಲ್ಲಿ ರಣವೀರ್‌ ಕಾಣಿಸಿಕೊಳ್ಳುತ್ತಾರೆ. ಈ ಚಿತ್ರವನ್ನು ಕರಣ್‌ ಜೊಹರ್‌ ನಿರ್ಮಿಸಲಿದ್ದಾರೆ. ಈ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಆದರೆ ಸಿನಿ ಮಂದಿ ಮಾತ್ರ ಕಾತುರದಿಂದ ಕಾಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry