ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಸ್ಥಾನದಿಂದ ಟಿಲ್ಲರ್‌ಸನ್‌ ವಜಾ: ಡೊನಾಲ್ಡ್‌ ಟ್ರಂಪ್‌

7

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಸ್ಥಾನದಿಂದ ಟಿಲ್ಲರ್‌ಸನ್‌ ವಜಾ: ಡೊನಾಲ್ಡ್‌ ಟ್ರಂಪ್‌

Published:
Updated:
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಸ್ಥಾನದಿಂದ ಟಿಲ್ಲರ್‌ಸನ್‌ ವಜಾ: ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿದೇಶಾಂಗ ಕಾರ್ಯದರ್ಶಿ ಸ್ಥಾನದಿಂದ ರೆಕ್ಸ್‌ ಟಿಲ್ಲರ್‌ಸನ್‌  ಅವರನ್ನು ಮಂಗಳವಾರ ವಜಾಗೊಳಿಸಿರುವುದಾಗಿ ಘೋಷಿಸಿದ್ದಾರೆ.

‘ವಿದೇಶಾಂಗ ಕಾರ್ಯದರ್ಶಿ ಸ್ಥಾನಕ್ಕೆ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ನಿರ್ದೇಶಕರಾದ ಮೈಕ್‌ ಪಾಂಪಿಯೊ ನೇಮಿಸಲಾಗಿದೆ. ಸಿಐಎ ನಿರ್ದೇಶಕ ಸ್ಥಾನವನ್ನು ಗಿನಾ ಹಾಸ್ಪೆಲ್‌ ತುಂಬಲಿದ್ದಾರೆ. ಮೊದಲ ಬಾರಿಗೆ ಮಹಿಳೆಯೊಬ್ಬರು ಸಿಐಎ ಅಧಿಕಾರ ವಹಿಸುತ್ತಿದ್ದಾರೆ. ರೆಕ್ಸ್‌ ಟಿಲ್ಲರ್‌ಸನ್‌  ಅವರ ಸೇವೆಗೆ ಧನ್ಯವಾದ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ಉತ್ತರ ಕೊರಿಯಾದೊಂದಿಗೆ ಮಾತುಕತೆ ಹಾಗೂ ವಾಣಿಜ್ಯ ಚರ್ಚೆಗಳಲ್ಲಿ ಭಾಗಿಯಾಗುವ ಮುನ್ನ ಅಧ್ಯಕ್ಷ ಟ್ರಂಪ್‌ ಹೊಸ ತಂಡವನ್ನು ಹೊಂದಲು ನಿರ್ಧರಿಸಿರುವುದಾಗಿ ಶ್ವೇತ ಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟ್ರಂಪ್‌ ಅವರನ್ನು ಟಿಲ್ಲರ್‌ಸನ್‌ ಮಂದ ಬುದ್ಧಿಯವ ಎಂದು ಕರೆದಿದ್ದಾಗಿ ಕಳೆದ ಅಕ್ಟೋಬರ್‌ನಲ್ಲಿ ಎನ್‌ಬಿಸಿ ನ್ಯೂಸ್‌ ವರದಿ ಮಾಡಿತ್ತು. ಆದರೆ, ಅಧ್ಯಕ್ಷರ ಜತೆಗಿನ ಸಂಬಂಧ ಗಟ್ಟಿಯಾಗಿದೆ ಎಂದೇ ಟಿಲ್ಲರ್‌ಸನ್‌ ಹೇಳಿಕೆ ನೀಡಿದ್ದರು.

ಟ್ರಂಪ್‌ ನಿರ್ಧಾರ ಪ್ರಕಟಿಸುವ ಕೆಲವೇ ಗಂಟೆಗಳ ಮುಂಚೆ ಟಿಲ್ಲರ್‌ಸನ್‌ ಆಫ್ರಿಕಾ ಪ್ರವಾಸದಿಂದ ಹಿಂದಿರುಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry