180 ಕಿಮೀ, 5000 ರೈತರು, ಮಹಾ ರೈತರ ಪ್ರತಿಭಟನೆಗೆ ಸ್ಫೂರ್ತಿ ನೀಡಿದ ವ್ಯಕ್ತಿ ವಿಜು ಕೃಷ್ಣ

7

180 ಕಿಮೀ, 5000 ರೈತರು, ಮಹಾ ರೈತರ ಪ್ರತಿಭಟನೆಗೆ ಸ್ಫೂರ್ತಿ ನೀಡಿದ ವ್ಯಕ್ತಿ ವಿಜು ಕೃಷ್ಣ

Published:
Updated:
180 ಕಿಮೀ, 5000 ರೈತರು, ಮಹಾ ರೈತರ ಪ್ರತಿಭಟನೆಗೆ ಸ್ಫೂರ್ತಿ ನೀಡಿದ ವ್ಯಕ್ತಿ ವಿಜು ಕೃಷ್ಣ

ಮುಂಬೈ: ನಾಸಿಕ್‌ನಿಂದ ಆರು ದಿನ ನಡೆದು 180 ಕಿ.ಮೀ. ಕ್ರಮಿಸಿ ಮುಂಬೈಗೆ ಬಂದಿದ್ದರು ಆ ರೈತರು, ಭಾನುವಾರ ರಾತ್ರಿ ಮುಂಬೈಗೆ ಬಂದಿದ್ದ ರೈತರ ಮೆರವಣಿಗೆ ಸೋಮವಾರ ಬೆಳಿಗ್ಗೆ ಏಳು ಗಂಟೆಗೆ ಮೊದಲೇ ಆಜಾದ್‌ ಮೈದಾನ ತಲುಪಿತ್ತು. ಅಲ್ಲಿ ಸೇರಿದ ರೈತರ ಸಂಖ್ಯೆ 50,000! ಇಷ್ಟೊಂದು ಬೃಹತ್ ಪ್ರತಿಭಟನೆಗೆ ಮುಂಬೈ ನಗರ ಸಾಕ್ಷಿಯಾಗಿತ್ತು,

ಅಂದಹಾಗೆ ಇಷ್ಟೊಂದು ಸಂಖ್ಯೆಯಲ್ಲಿ ರೈತರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸುವುದು ಸುಲಭದ ಸಂಗತಿಯಲ್ಲ, ಆದರೆ ರೈತರ ಮನವಿಯನ್ನು ಸರ್ಕಾರಕ್ಕೆ ಮುಟ್ಟಿಸಬೇಕಾದರೆ ಈ ರೀತಿಯ ಪ್ರತಿಭಟನೆಯೊಂದರ ಅಗತ್ಯ ಇತ್ತು, ಈ ಪ್ರತಿಭಟನೆಗಾಗಿ  50,000 ರೈತರನ್ನು ಒಗ್ಗೂಡಿಸಿದ ವ್ಯಕ್ತಿಯ ಹೆಸರು ವಿಜು ಕೃಷ್ಣನ್,

ಪ್ರತಿಭಟನೆಗೆ ಸ್ಫೂರ್ತಿ ನೀಡಿದ ಮಲಯಾಳಿ

44ರ ಹರೆಯದ ವಿಜು ಕೃಷ್ಣನ್ ಕೇರಳದ ಕಣ್ಣೂರು ಜಿಲ್ಲೆಯವರು. ಕಣ್ಣೂರಿನ ಕರಿವೆಳ್ಳೂರು ಗ್ರಾಮದಲ್ಲಿ ಹುಟ್ಟಿ ಬೆಳೆದ ವಿಜು ಅಖಿಲ ಭಾರತ ಕಿಸಾನ್ ಸಭಾದ (ಎಐಕೆಎಸ್) ಜತೆ ಕಾರ್ಯದರ್ಶಿಯಾಗಿದ್ದಾರೆ,

2009ರಿಂದ ರೈತರ ಹೋರಾಟಗಳಲ್ಲಿ ಸಕ್ರಿಯವಾಗಿದ್ದಾರೆ ವಿಜು ಕಳೆದ ತಿಂಗಳು ರಾಜಸ್ತಾನದಲ್ಲಿ ನಡೆದ  ರೈತರ ಪ್ರತಿಭಟನೆಯಲ್ಲಿಯೂ ವಿಜು ಸಕ್ರಿಯವಾಗಿದ್ದರು, ಜೆಎನ್‍ಯು ನಲ್ಲಿ ಕಲಿಯುತ್ತಿದ್ದ ವೇಳೆ ರಾಜಕೀಯಕ್ಕೆ ಧುಮುಕಿದ್ದರು ವಿಜು. ಎಸ್‍ಎಫ್‍ಐ ಅಧ್ಯಕ್ಷರಾಗಿದ್ದ ಇವರು ಜೆಎನ್‍ಯುವಿನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟಕ್ಕೆ ನೇತೃತ್ವ ನೀಡಿದ್ದರು, ಉದಾರೀಕರಣದ ಕಾಲದಲ್ಲಿ ಕೃಷಿ ವಲಯದಲ್ಲಿನ ಸಂಕಷ್ಟಗಳು : ಕೇರಳ ಮತ್ತು ಆಂಧ್ರದ ಬಗ್ಗೆ ಅಧ್ಯಯನ' ಎಂಬ ವಿಷಯದ  ಬಗ್ಗೆ ಇವರು ಸಂಶೋಧನಾ ಪ್ರಬಂಧ ಮಂಡಿಸಿದ್ದರು.

ಇದಾದ ನಂತರ ಬೆಂಗಳೂರು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪೊಲಿಟಿಕಲ್ ಸಯನ್ಸ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದರು, ಆಮೇಲೆ ಆ ವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯದಲ್ಲಿ ಸಕ್ರಿಯವಾಗಲು ತೀರ್ಮಾನಿಸಿದ್ದರು.ಆ ಹೊತ್ತಲ್ಲಿ ಅಮ್ಮನ ಅಭಿಪ್ರಾಯ ಕೇಳಲು ಊರಿಗೆ ಬಂದಾಗ ಅವರ ಅಮ್ಮ ಮಗನ ನಿರ್ಧಾರವನ್ನು  ಸಂತೋಷದಿಂದ ಸ್ವೀಕರಿಸಿದರು, ಇದು ನಿನ್ನ ತೀರ್ಮಾನವಾಗಿದ್ದರೆ ಸಂತೋಷವಿದೆ, ನೀನು ನಮ್ಮ ದೇಶದ ಉತ್ತಮ ನಾಯಕನಾಗಬೇಕು. ಸಾಮಾನ್ಯ ನೇತಾರನಲ್ಲ, ಎಕೆಜಿ (ಎ.ಕೆ.ಗೋಪಾಲನ್) ಅವರಂತೆ ದೊಡ್ಡ ನಾಯಕ. ಅಮ್ಮನ ಈ ಮಾತುಗಳೇ ನನಗೆ ಶಕ್ತಿ ಅಂತಾರೆ ವಿಜು.

ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ರಾಜಸ್ತಾನ , ಕರ್ನಾಟಕ, ಮಧ್ಯಪ್ರದೇಶದಲ್ಲಿಯೂ ಹಲವಾರು ಹೋರಾಟಗಳಿಗೆ ವಿಜು ನೇತೃತ್ವ ನೀಡಿದ್ದಾರೆ, 2009ರ ನಂತರ ರೈತರ ಹೋರಾಟಗಳ ನೇತೃತ್ವ ವಹಿಸಿದ್ದ ಇವರು 2016 ಆಗಸ್ಟ್ 15ರಂದು ನಡೆದ ದಲಿತ ಅಸ್ಮಿತೆ ಯಾತ್ರೆಯಲ್ಲಿ ಜಿಗ್ನೀಶ್ ಮೆವಾನಿ ಜತೆ ಭಾಗಿಯಾಗಿದ್ದರು,  2016 ನವೆಂಬರ್‍‍ನಲ್ಲಿ ತಮಿಳುನಾಡಿನ ವಿದುರನಗರದಲ್ಲಿ ಆರಂಭವಾದ ಕಿಸಾನ್ ಸಭೆಯ ಕಿಸಾನ್ ಸಂಘರ್ಷ ಜಾಥಾದಲ್ಲಿಯೂ ವಿಜು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry