ಸ್ವಾಗತಾರ್ಹ ತೀರ್ಪು

7

ಸ್ವಾಗತಾರ್ಹ ತೀರ್ಪು

Published:
Updated:

ಧರ್ಮಸೂಕ್ಷ್ಮ ಎಂಬುದೊಂದಿದೆ. ಅದು ಕೋರ್ಟ್‌ಗಳಿಗಿಂತ, ಸುಗ್ರೀವಾಜ್ಞೆಗಳಿಗಿಂತ ದೊಡ್ಡದು. ಆತ್ಮಹತ್ಯೆಗೂ ದಯಾಮರಣಕ್ಕೂ ವ್ಯತ್ಯಾಸವರಿಯದ ಆಡಳಿತಗಾರರು ದಯಾಮರಣ ಬೇಡಿಕೆಯನ್ನು ವಿರೋಧಿಸುತ್ತಲೇ ಬಂದಿದ್ದರು. ಸಾವಿನ ಘನತೆಯು ಬದುಕಿನ ಘನತೆಗೆ ಸಮ ಎಂದು ಸುಪ್ರೀಂ ಕೋರ್ಟ್‌ ಚಿಂತಿಸಿ, ಚಿಂತಿತರನ್ನು ಪಾರು ಮಾಡಿದೆ. ಸಲ್ಲೇಖನ ತೆಗೆದುಕೊಳ್ಳಲು ಸರ್ಕಾರ ಬಿಡುತ್ತೋ ಇಲ್ಲವೋ ಎಂಬ ಅನುಮಾನ ಕಾಡುತ್ತಿತ್ತು. ಜೈನನಲ್ಲದಿದ್ದರೆ ಕೊಡದೆ ಸತಾಯಿಸಬಹುದು ಎಂದು ಹೆದರಿದ್ದೆ. ಜೈ ‘ಸುಪ್ರೀಂ’, ಜೈ ಸಾವಿನ ಘನತೆ.

ಎಂ. ರಾಮಶೇಷು, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry