ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ನಡೆ ಸಲ್ಲ

Last Updated 13 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಉಡುಪಿಯ ಮಠಾಧೀಶರೊಬ್ಬರು ತಾವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಒಂದು ರಾಷ್ಟ್ರೀಯ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ಟಿಕೆಟ್ ದೊರೆಯದಿದ್ದಲ್ಲಿ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಅವರು ಹೇಳಿದ್ದಾರೆ.

ಸನ್ಯಾಸ ಸ್ವೀಕಾರ ಮಾಡಿದವರು ಲೌಕಿಕ ವ್ಯವಹಾರಗಳನ್ನು ತೊರೆಯಬೇಕು. ಆಸ್ತಿಕ ಜನರನ್ನು ಧರ್ಮದ ಹಾದಿಯಲ್ಲಿ ಮುನ್ನಡೆಸಬೇಕು. ಮೋಕ್ಷ ಪಡೆಯುವ ಕೆಲಸಗಳ ಕಡೆಗೆ ಅಧ್ಯಾತ್ಮದ ಚಿಂತನೆಯ ಮೂಲಕ ಕರೆದೊಯ್ಯಬೇಕು.

ಕಾಷಾಯವಸ್ತ್ರಧಾರಿಯಾಗಿಯೂ ಲೌಕಿಕ ವ್ಯವಹಾರಗಳ ಕಡೆಗೆ ಮನಸ್ಸು ತುಡಿದರೆ, ಸನ್ಯಾಸತ್ವವಾದರೂ ಯಾತಕ್ಕೆ ಬೇಕಾಗಿತ್ತು ಎಂಬ ಪ್ರಶ್ನೆ ಏಳುತ್ತದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬಹಳ ಕಾಲದಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಅವರು ಮಾಡಿದರೆಂದು ಇವರೂ ಮಾಡಲು ಹೊರಟರೆ ಸರಿಹೋಗುತ್ತದೆಯೇ? ಶ್ರೀಗಳು ಇಂತಹ ಯೋಚನೆಗಳನ್ನು ಬದಿಗೊತ್ತಿ, ಭಕ್ತಜನರ ಅಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ಮಾಡಲಿ. ಅಥವಾ ಕಾಷಾಯ ವಸ್ತ್ರವನ್ನು ತೊರೆದು ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಪ್ರವೇಶಿಸಲಿ.

ವಿಜಯ್ ಹೆಮ್ಮಿಗೆ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT