‘ಎರಡು ಪೆಗ್‌ ಹಾಕಿ ಕುಳಿತರೆ...’

7

‘ಎರಡು ಪೆಗ್‌ ಹಾಕಿ ಕುಳಿತರೆ...’

Published:
Updated:

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ನಿಪ್ಪಾಣಿ–ಮುಧೋಳ ರಸ್ತೆ ಈ ಮೊದಲು ಹೇಗಿತ್ತು ? ಈಗ ಹೇಗಾಗಿದೆ? ಎರಡು ಪೆಗ್‌ ಹಾಕಿ ಕುಳಿತರೂ ನೀವು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ತಲುಪುತ್ತೀರಿ.’

ಹೀಗೆಂದು ಹೇಳಿದವರು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ.

ಚಿಕ್ಕೋಡಿ–ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಸಚಿವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ರಸ್ತೆಗಳು ಅಭಿವೃದ್ಧಿಯಾಗಿವೆ ಎಂದು ಹೇಳುವ ಸಂದರ್ಭದಲ್ಲಿ ಅವರು ಆಡಿದ ಈ ಮಾತು ಸಭಿಕರ ಚಪ್ಪಾಳೆ,  ಶಿಳ್ಳೆಯನ್ನು ಪಡೆಯಿತು. ಜೊತೆಗೆ, ಈ ಹೇಳಿಕೆಯ ಔಚಿತ್ಯದ ಬಗ್ಗೆ ಸಭಿಕರು ಅಲ್ಲಲ್ಲಿ ಚರ್ಚಿಸಿದ್ದೂ ಕೇಳಿ ಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry