ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ

7

ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ

Published:
Updated:

ಕಾನ್ಪುರ: ಅಸ್ಥಿಮಜ್ಜೆ ಸಮಸ್ಯೆಯಿಂದ ಬಳಲುತ್ತಿರುವ ತಾಯಿ ಮತ್ತು ಮಗಳು ತಮಗೆ ಪರೋಕ್ಷ ದಯಾ ಮರಣ ನೀಡುವಂತೆ ಕೋರಿ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಉತ್ತರ ಪ್ರದೇಶ ಕಾನ್ಪುರದ ಶಶಿ ಮಿಶ್ರಾ (59) ಹಾಗೂ ಅನಾಮಿಕಾ ಮಿಶ್ರಾ (33) ಈ ಮನವಿ ಸಲ್ಲಿಸಿದ್ದಾರೆ. ಮ್ಯಾಜಿಸ್ಟ್ರೇಟ್‌ ಕೋರ್ಟ್‌ನ ರಾಜ ನಾರಾಯಣ ಪಾಂಡೆ ಅವರು ಈ ಮನವಿ ಪತ್ರವನ್ನು ರಾಷ್ಟ್ರಪತಿಗಳಿಗೆ ರವಾನಿಸಿದ್ದಾರೆ.

‘ನಮ್ಮದು ಆನುವಂಶಿಕ ಕಾಯಿಲೆ. ನನ್ನ ತಂದೆ ಕೂಡ ಇದೇ ರೋಗಕ್ಕೆ ತುತ್ತಾಗಿ 15 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಈ ಕಾಯಿಲೆಯಿಂದ ನಾವು ಮಲಗಿದಲ್ಲಿಯೇ ಇರಬೇಕಾಗಿದೆ. ದಯಾಮರಣ ಕೋರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರಿಗೂ ಈ ಹಿಂದೆಯೇ ಪತ್ರ ಬರೆದಿದ್ದೆವು’ ಎಂದು  ಪತ್ರದಲ್ಲಿ ಅನಾಮಿಕಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry