ಅಮಿತಾಭ್‌ಗೆ ಅನಾರೋಗ್ಯ

ಬುಧವಾರ, ಮಾರ್ಚ್ 20, 2019
26 °C

ಅಮಿತಾಭ್‌ಗೆ ಅನಾರೋಗ್ಯ

Published:
Updated:
ಅಮಿತಾಭ್‌ಗೆ ಅನಾರೋಗ್ಯ

ಜೈಪುರ: ಜೋಧಪುರದಲ್ಲಿ ಚಲನಚಿತ್ರವೊಂದರ ಚಿತ್ರೀಕರಣದಲ್ಲಿ ತೊಡಗಿದ್ದ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಮುಂಬೈನ ಲೀಲಾವತಿ ಆಸ್ಪತ್ರೆ ವೈದ್ಯರು ಮಂಗಳವಾರ ಜೋಧಪುರಕ್ಕೆ ತೆರಳಿ ಚಿಕಿತ್ಸೆ ನೀಡಿದರು.

ಕರುಳುಬೇನೆ ತಜ್ಞ ಡಾ. ಜಯಂತ್ ಬಾರ್ವ್ ಅವರು ಚಿಕಿತ್ಸೆ ನೀಡಿದರು.  ಅಮಿತಾಭ್‌ ಅವರ ಆರೋಗ್ಯ ಸ್ಥಿರವಾಗಿದ್ದು, ಮುಂಬೈಗೆ ವಾಪಸಾಗುವ ಸಾಧ್ಯತೆಯಿದೆ. ಆದರೆ ಅವರ ಅನಾರೋಗ್ಯಕ್ಕೆ ಕಾರಣ ಏನೆಂಬುದು ಬಹಿರಂಗಗೊಂಡಿಲ್ಲ.

ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದ ಚಿತ್ರೀಕರಣ ಮುಗಿಸಿ ಹೋಟೆಲ್‌ಗೆ ಹಿಂದಿರುಗಿದಾಗ ಅಮಿತಾಭ್ ತೀವ್ರ ಬಳಲಿದಂತೆ ಕಂಡುಬಂದರು ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.

ಅನಾರೋಗ್ಯದ ವಿಷಯವನ್ನು ಅಮಿತಾಭ್ ತಮ್ಮ ಟ್ವಿಟರ್ ಖಾತೆ ಬರೆದುಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry