ಕುಲಾಂತರಿ ಹತ್ತಿ ಬೀಜ ಬೆಲೆ ಕಡಿತ

ಮಂಗಳವಾರ, ಮಾರ್ಚ್ 19, 2019
26 °C

ಕುಲಾಂತರಿ ಹತ್ತಿ ಬೀಜ ಬೆಲೆ ಕಡಿತ

Published:
Updated:
ಕುಲಾಂತರಿ ಹತ್ತಿ ಬೀಜ ಬೆಲೆ ಕಡಿತ

ನವದೆಹಲಿ: ಕುಲಾಂತರಿ (ಬಿ.ಟಿ) ಹತ್ತಿ ಬೀಜದ ಗರಿಷ್ಠ ಮಾರಾಟ ಬೆಲೆಯನ್ನು ಪ್ರತಿ ಪ್ಯಾಕೆಟ್‌ಗೆ ₹ 740ಕ್ಕೆ ಇಳಿಸಲಾಗಿದೆ.

450 ಗ್ರ್ಯಾಂನ ಪ್ರತಿ ಪ್ಯಾಕೆಟ್‌ನ ಬೆಲೆಯನ್ನು ಈ ಹಿಂದಿನ ₹ 800 ದಿಂದ ₹ 740ಕ್ಕೆ ಇಳಿಸಲಾಗಿದೆ. ದೇಶಿ ಬೀಜ ತಯಾರಿಕಾ ಸಂಸ್ಥೆಗಳು ತಂತ್ರಜ್ಞಾನ ಅಭಿವೃದ್ಧಿಪಡಿಸುವ ಮಾನ್ಸೊಂಟೊ ಮಹಿಕೊ ಬಯೊಟೆಕ್‌ (ಇಂಡಿಯಾ) ಲಿಮಿಟೆಡ್‌ಗೆ ನೀಡುವ ಗೌರವ ಧನವನ್ನು ಪ್ರತಿ ಪ್ಯಾಕೆಟ್‌ಗೆ ₹ 49 ದಿಂದ ₹ 39ಕ್ಕೆ ಇಳಿಸಲಾಗಿದೆ.

ಹೊಸ ದರಗಳು ಜೂನ್‌ನಿಂದ ಆರಂಭಗೊಳ್ಳುವ ಮುಂಗಾರು ಹಂಗಾಮಿನಿಂದ ಜಾರಿಗೆ ಬರಲಿವೆ.

ಈ ನಿರ್ಧಾರವು 80 ಲಕ್ಷ ಹತ್ತಿ ಬೆಳೆಗಾರರಿಗೆ ಪ್ರಯೋಜನ ಒದಗಿಸಲಿದೆ. ಆದರೆ, ಬೀಜ ತಯಾರಿಸುವ ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸುವ ಸಂಸ್ಥೆಗಳ ಲಾಭ ಕಡಿಮೆ ಮಾಡಲಿದೆ.

‘ಬಿಜಿ–1’ ಮಾದರಿಯ ಬೀಜಗಳ ದರದಲ್ಲಿ (ಪ್ರತಿ ಪ್ಯಾಕೆಟ್‌ಗೆ ₹ 635) ಯಾವುದೇ ಬದಲಾವಣೆ ಇಲ್ಲ. ‘ಬಿಜಿ–II' ಮಾದರಿಯ ಬೀಜಗಳಿಗೆ ಮಾತ್ರ ಹೊಸ ದರ ಅನ್ವಯವಾಗಲಿದೆ.

ಬೆಳೆ ನಷ್ಟ ಮತ್ತು ಕೀಟ ಹಾವಳಿಯಿಂದ ನಷ್ಟಕ್ಕೆ ಗುರಿಯಾದ ಬೆಳೆಗಾರರಿಗೆ ಈ ಬೆಲೆ ಕಡಿತವು ಕೆಲಮಟ್ಟಿಗೆ ಪರಿಹಾರ ಒದಗಿಸಲಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.

ಕುಲಾಂತರಿ ಹತ್ತಿಯ ವಾಣಿಜ್ಯ ಸಾಗುವಳಿಗೆ ಮಾತ್ರ ದೇಶದಲ್ಲಿ ಅವಕಾಶ ಇದೆ. ದೇಶದಲ್ಲಿ ಹತ್ತಿ ಬೆಳೆಯುವ ಪ್ರದೇಶದ ಶೇ 95ರಷ್ಟು ಭಾಗದಲ್ಲಿ ‘ಬಿ.ಟಿ ಹತ್ತಿ’ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದರಿಂದಾಗಿ ಭಾರತ ಹತ್ತಿ ಬೆಳೆಯುವ ಮತ್ತು ರಫ್ತು ಮಾಡುವ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದೆ.

ವರ್ಷ         ಹತ್ತಿ ಉತ್ಪಾದನೆ ಅಂದಾಜು

2018–19   3.39 ಕೋಟಿ ಬೇಲ್ಸ್‌*

2017–18   3.25 ಕೋಟಿ ಬೇಲ್ಸ್‌*

(* ಒಂದು ಬೇಲ್‌ = 170 ಕೆಜಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry