ಜಿಎಸ್‌ಟಿ ನಷ್ಟ: ರಾಜ್ಯಗಳಿಗೆ ₹ 28,398 ಕೋಟಿ ಪರಿಹಾರ

7

ಜಿಎಸ್‌ಟಿ ನಷ್ಟ: ರಾಜ್ಯಗಳಿಗೆ ₹ 28,398 ಕೋಟಿ ಪರಿಹಾರ

Published:
Updated:

ನವದೆಹಲಿ: ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗಿರುವ ನಷ್ಟ ತುಂಬಿಕೊಡಲು ಕೇಂದ್ರ ಬಿಡುಗಡೆ ಮಾಡಿರುವ ಹಣದಲ್ಲಿ ಗರಿಷ್ಠ ಮೊತ್ತ ಕರ್ನಾಟಕದ ಪಾಲಾಗಿದೆ.

ಜುಲೈ–ಡಿಸೆಂಬರ್‌ ಅವಧಿಯಲ್ಲಿ ರಾಜ್ಯಗಳಿಗೆ ಆಗಿರುವ ನಷ್ಟ ಭರಿಸಲು ಕೇಂದ್ರ ಸರ್ಕಾರ  ₹ 28,398 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕ ರಾಜ್ಯಕ್ಕೆ ₹ 4,130 ಕೋಟಿ ಸಿಕ್ಕಿದೆ.

‘ಪರಿಹಾರ ನೀಡುವ ಮೂಲಕ ಹೊಸ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಆಗಿರುವ ವರಮಾನ ನಷ್ಟದಿಂದ ರಕ್ಷಣೆ ಒದಗಿಸಲಾಗುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಪರೋಕ್ಷ ತೆರಿಗೆ ಮೂಲಕ ₹ 9.26 ಲಕ್ಷ ಕೋಟಿ ಸಂಗ್ರಹವಾಗಲಿದೆ ಎಂದು ಬಜೆಟ್‌ನಲ್ಲಿ ಅಂದಾಜಿಸಲಾಗಿತ್ತು. ಪರಿಷ್ಕೃತ ಅಂದಾಜಿನಲ್ಲಿ ತೆರಿಗೆ ಸಂಗ್ರಹದ ಮೊತ್ತವನ್ನು

₹ 8.75 ಲಕ್ಷ ಕೋಟಿಗೆ ತಗ್ಗಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry