ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವೇದಿ ಸೂಚ್ಯಂಕ ಇಳಿಕೆ

Last Updated 13 ಮಾರ್ಚ್ 2018, 20:08 IST
ಅಕ್ಷರ ಗಾತ್ರ

ಮುಂಬೈ: ಆಯ್ದ ಷೇರು ಗಳಲ್ಲಿ ಲಾಭ ಗಳಿಕೆಯ ಉದ್ದೇಶದ ವಹಿವಾಟು ನಡೆದಿದ್ದರಿಂದ ಮಂಗಳವಾರ ಷೇರು‍ಪೇಟೆ ವಹಿವಾಟು ಅಲ್ಪ ಇಳಿಕೆ ಕಂಡಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 61 ಅಂಶ ಇಳಿಕೆ ಕಂಡು 33,856 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಆದರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 5 ಅಂಶ ಹೆಚ್ಚಾಗಿ ಎರಡನೇ ದಿನವೂ ಗರಿಷ್ಠ ಮಟ್ಟವಾದ 10,427 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ಐಟಿ ವಲಯದಲ್ಲಿ ಟಿಸಿಎಸ್‌ ಶೇ 5.22 ರಷ್ಟು ಗರಿಷ್ಠ ಕುಸಿತ ಕಂಡರೆ, ಎಚ್‌ಸಿಎಲ್‌ ಟೆಕ್‌ ಶೇ 0.89 ಮತ್ತು ಇನ್ಫೊಸಿಸ್‌ ಶೇ 0.45 ರಷ್ಟು ಇಳಿಕೆ ಕಂಡಿವೆ.

‘ಹಣದುಬ್ಬರ ಇಳಿಕೆ ಮತ್ತು ಕೈಗಾರಿಕಾ ತಯಾರಿಕಾ ಸೂಚ್ಯಂಕದ (ಐಐಪಿ) ಏರಿಕೆಯು ಷೇರುಪೇಟೆಯಲ್ಲಿ ಸಕಾರಾತ್ಮಕ ಚಟುವಟಿಕೆಯನ್ನು ಮುಂದುವರಿಯುವಂತೆ ಮಾಡಿತು. ಆದರೆ, ಐಟಿ ಕಂಪನಿ ಷೇರುಗಳಲ್ಲಿ ಕಂಡುಬಂದ ಮಾರಾಟದ ಒತ್ತಡ ಮತ್ತು ಬ್ಯಾಂಕ್‌ ಷೇರುಗಳು ಲಾಭ ಗಳಿಕೆ ಉದ್ದೇಶದ ವಹಿವಾಟಿಗೆ ಒಳಗಾಗಿದ್ದರಿಂದ ಸೂಚ್ಯಂಕ ಅಲ್ಪ ಇಳಿಕೆ ಕಾಣುವಂತಾಯಿತು’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT