ಕ್ಯುಐಪಿ: ₹ 1,000 ಕೋಟಿ ಸಂಗ್ರಹ

7

ಕ್ಯುಐಪಿ: ₹ 1,000 ಕೋಟಿ ಸಂಗ್ರಹ

Published:
Updated:

ನವದೆಹಲಿ: ಎಲ್‌ಆ್ಯಂಡ್‌ಟಿ ಫೈನಾನ್ಸ್‌ ಹೋಲ್ಡಿಂಗ್ಸ್‌ (ಎಲ್‌ಟಿಎಫ್‌ಎಚ್‌) ಕಂಪನಿಯು ಅರ್ಹ ಸಾಂಸ್ಥಿಕ ವಿತರಣೆ (ಕ್ಯುಐಪಿ) ಮೂಲಕ ₹ 1,000 ಕೋಟಿ ಸಂಗ್ರಹಿಸಿದೆ.

ಮಾರ್ಚ್‌ 8 ರಂದು ಕ್ಯುಐಪಿ ಬಿಡುಗಡೆ ಮಾಡಲಾಗಿತ್ತು. ಮಾರ್ಚ್‌ 13ಕ್ಕೆ ಮುಕ್ತಾಯವಾಗಿದ್ದು, ಪ್ರತಿ ಷೇರಿನ ನೀಡಿಕೆ ಬೆಲೆ ₹ 158.60 ರಂತೆ ಈ ಮೊತ್ತ ಸಂಗ್ರಹವಾಗಿದೆ ಎಂದು ತಿಳಿಸಿದೆ.

‘ವಹಿವಾಟು ವೃದ್ಧಿಗಾಗಿ ಈ ಬಂಡವಾಳ ಬಳಸಲಾಗುವುದು’ ಎಂದು ಕಂಪನಿ ಸಿಇಒ ದೀನಾನಾಥ್‌ ದುಬಾಷಿ ತಿಳಿಸಿದ್ದಾರೆ.

‘ಎಲ್‌ಟಿಎಫ್‌ಎಚ್‌’ ಒಂದು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯಾಗಿದ್ದು, ಗೃಹ, ಸಗಟು ವಿಭಾಗದಲ್ಲಿ ಹಣಕಾಸು ಸೇವೆಗಳನ್ನು ಒದಗಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry