ಬಿಎಫ್‌ಸಿಗೆ ಚೆನ್ನೈಯಿನ್ ಎದುರಾಳಿ

7

ಬಿಎಫ್‌ಸಿಗೆ ಚೆನ್ನೈಯಿನ್ ಎದುರಾಳಿ

Published:
Updated:
ಬಿಎಫ್‌ಸಿಗೆ ಚೆನ್ನೈಯಿನ್ ಎದುರಾಳಿ

ಚೆನ್ನೈ : ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫೈನಲ್‌ನಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡವನ್ನು ಚೆನ್ನೈಯಿನ್ ಎಫ್‌ಸಿ ಎದುರಿಸಲಿದೆ.

ಮಂಗಳವಾರ ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಎರಡನೇ ಸೆಮಿಫೈನಲ್‌ನ ಎರಡನೇ ಲೆಗ್ ಪಂದ್ಯದಲ್ಲಿ ಚೆನ್ನೈಯಿನ್ ತಂಡ ಎಫ್‌ಸಿ ಗೋವಾ ತಂಡವನ್ನು 3–0 ಗೋಲುಗಳಿಂದ ಮಣಿಸಿತು.

ಜೆಜೆ ಲಾಲ್‌ಪೆಖ್ಲುವಾ 26 ಮತ್ತು 90ನೇ ನಿಮಿಷಗಳಲ್ಲಿ ಗೋಲು ಗಳಿಸಿ ಮಿಂಚಿದರು. 29ನೇ ನಿಮಿಷದಲ್ಲಿ ಧನಪಾಲ್ ಗಣೇಶ್ ಅವರು ಚೆನ್ನೈಯಿನ್ ತಂಡದ ಪರ ಮತ್ತೊಂದು ಗೋಲು ಗಳಿಸಿದರು.

17ರಂದು ಬೆಂಗಳೂರಿನ ಕಂಠೀ ರವ ಕ್ರಿಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. 11ರಂದು ನಡೆದ ‍ಮೊದಲನೇ ಸೆಮಿಫೈನಲ್‌ನ ಎರಡನೇ ಲೆಗ್ ಪಂದ್ಯದಲ್ಲಿ ಎಫ್‌ಸಿ ಪುಣೆಯನ್ನು ಮಣಿಸಿ ಬಿಎಫ್‌ಸಿ ಫೈನಲ್‌ಗೆ ಪ್ರವೇಶಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry