ಹಣ ಮರಳಿಸಲು ಕ್ಲಿಫೋರ್ಡ್ ಸಿದ್ಧ

ಶನಿವಾರ, ಮಾರ್ಚ್ 23, 2019
22 °C
ಟ್ರಂಪ್ ಜತೆ ಲೈಂಗಿಕ ಸಂಪರ್ಕ: ಮೌನ ವಹಿಸುವ ಒಪ್ಪಂದ

ಹಣ ಮರಳಿಸಲು ಕ್ಲಿಫೋರ್ಡ್ ಸಿದ್ಧ

Published:
Updated:
ಹಣ ಮರಳಿಸಲು ಕ್ಲಿಫೋರ್ಡ್ ಸಿದ್ಧ

ಲಾಸ್ ಏಂಜಲಿಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದರು ಎನ್ನಲಾದ ವಯಸ್ಕರ ಸಿನಿಮಾಗಳ ತಾರೆ ಸ್ಟಾರ್ಮಿ ಡೇನಿಯಲ್ಸ್, ತಾವು ಪಡೆದ ಹಣವನ್ನು ಮರುಪಾವತಿ ಮಾಡುವುದಾಗಿ ಹೇಳಿದ್ದಾರೆ.

2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಮಾಡಿಕೊಳ್ಳಲಾದ ಒಪ್ಪಂದದ ಭಾಗವಾಗಿ ಸ್ಟಾರ್ಮಿ ಹಣ ಪಡೆದಿದ್ದಾರೆ. ಒಪ್ಪಂದದ ಪ್ರಕಾರ, ಟ್ರಂಪ್ ಜೊತೆಗಿನ ಲೈಂಗಿಕ ಸಂಪರ್ಕದ ಕುರಿತು ಮೌನ ವಹಿಸುವ ಸಲುವಾಗಿ ಸ್ಟಾರ್ಮಿ ಅವರಿಗೆ ₹ 84.19 ಲಕ್ಷ (1.3 ಲಕ್ಷ ಅಮೆರಿಕನ್ ಡಾಲರ್) ನೀಡಲಾಗಿತ್ತು.

ಟ್ರಂಪ್ ಅವರ ವಕೀಲ ಮೈಕೆಲ್ ಕೊಹೇನ್‌ಗೆ ಸ್ಟಾರ್ಮಿ ಅವರ ವಕೀಲ ಬರೆದ ಪತ್ರದ ಪ್ರತಿಯು ಸುದ್ದಿ ಸಂಸ್ಥೆಗೆ ದೊರೆತಿದೆ. ‌‘ಸ್ಟಾರ್ಮಿ ಅವರು ಹಣ ಮರಳಿಸಿದ ನಂತರ ಗೋಪ್ಯ ಒಪ್ಪಂದವು ಅನೂರ್ಜಿತವಾಗುತ್ತದೆ’ ಎಂದು ಅದರಲ್ಲಿ ಬರೆಯಲಾಗಿದೆ.

‘ಒಪ್ಪಂದ ರದ್ದಾದ ನಂತರ ಟ್ರಂಪ್ ಜೊತೆಗಿನ ಸಂಬಂಧದ ಕುರಿತು ಸ್ಟಾರ್ಮಿ ಮಾತನಾಡಬಹುದು. ಅಲ್ಲದೆ, ಸಂದೇಶ, ಛಾಯಾಚಿತ್ರಗಳು ಮತ್ತು ದೃಶ್ಯಗಳನ್ನು ಪ್ರಕಟಿಸದಂತೆ ನಿರ್ಬಂಧಿಸಿದ್ದರ ಕುರಿತಾಗಿಯೂ ಮಾತನಾಡಬಹುದು’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಕೊಹೇನ್ ಮತ್ತು ಟ್ರಂಪ್ ಅವರು ಈ ಪ್ರಸ್ತಾವವನ್ನು ಒಪ್ಪಿಕೊಳ್ಳಬೇಕು ಮತ್ತು ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳಲು ಸ್ಟಾರ್ಮಿ ಅವರಿಗೆ ಅವಕಾಶ ನೀಡಬೇಕು’ ಎಂದು ಪತ್ರದಲ್ಲಿ ಇದೆ. ಈ ಸಂಬಂಧ ಪ್ರತಿಕ್ರಿಯಿಸಲು ಕೊಹೇನ್  ಸೋಮವಾರ ನಿರಾಕರಿಸಿದ್ದಾರೆ.

ಒಪ್ಪಂದವನ್ನು ರದ್ದು ಮಾಡುವಂತೆ ಲಾಸ್ ಏಂಜಲಿಸ್ ನ್ಯಾಯಾಲಯಕ್ಕೆ ಸ್ಟಾರ್ಮಿ ಕಳೆದ ವಾರ ಮನವಿ ಮಾಡಿದ್ದಾರೆ.

‘ಟ್ರಂಪ್ ಅವರು ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸರಾ ಸ್ಯಾಂಡರ್ಸ್ ಕಳೆದ ವಾರ ಹೇಳಿದ್ದಾರೆ. ಕೊಹೇನ್ ಅವರೂ ಒಪ್ಪಂದ ನಡೆದಿಲ್ಲ ಎಂದು ಹೇಳಿದ್ದಾರೆ.

ಸ್ಟಾರ್ಮಿ ಡೇನಿಯಲ್ ಅವರ ನಿಜವಾದ ಹೆಸರು ಸ್ಟೆಫಾನಿ ಕ್ಲಿಫೋರ್ಡ್. ಆದರೆ, ಒಪ್ಪಂದದಲ್ಲಿ ಅವರ ಹೆಸರನ್ನು ಪೆಗ್ಗಿ ಪೀಟರ್‌ಸನ್ ಹಾಗೂ ಟ್ರಂಪ್ ಅವರನ್ನು ಡೇವಿಡ್ ಡೆನ್ನಿಸನ್ ಎಂದು ಉಲ್ಲೇಖಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry