ಸೆರೆನಾ ಸವಾಲು ಮೀರಿದ ವೀನಸ್‌

7
ಇಂಡಿಯಾನ ವೆಲ್ಸ್‌ ಟೆನಿಸ್‌; ನಾಲ್ಕನೇ ಸುತ್ತಿಗೆ ರೋಜರ್‌

ಸೆರೆನಾ ಸವಾಲು ಮೀರಿದ ವೀನಸ್‌

Published:
Updated:
ಸೆರೆನಾ ಸವಾಲು ಮೀರಿದ ವೀನಸ್‌

ಇಂಡಿಯಾನ ವೆಲ್ಸ್‌ : ವೀನಸ್ ವಿಲಿಯಮ್ಸ್‌, ಮಂಗಳವಾರ ಇಂಡಿಯಾನ ವೆಲ್ಸ್‌ ಟೆನಿಸ್‌ ಟೂರ್ನಿಯ ಪಂದ್ಯದಲ್ಲಿ  ತಮ್ಮ ಸಹೋದರಿ ಸೆರೆನಾ ವಿಲಿಯಮ್ಸ್‌ ಅವರನ್ನು ಸೋಲಿಸಿದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಹೋರಾಟದಲ್ಲಿ ವೀನಸ್‌ 6–3, 6–4ರ ನೇರ ಸೆಟ್‌ಗಳಿಂದ ಗೆದ್ದರು. 2017ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಉಭಯ ಆಟಗಾರ್ತಿಯರು ಎದುರಾಗಿದ್ದಾಗ ಸೆರೆನಾ ಗೆದ್ದಿದ್ದರು. ಹಿಂದಿನ ಈ ಸೋಲಿನ ಮುಯ್ಯಿ ತೀರಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ವೀನಸ್‌ ಆರಂಭದಿಂದಲೇ ಅಬ್ಬರಿಸಿದರು.

ಮಿಂಚಿನ ಸರ್ವ್‌ ಮತ್ತು ಮನಮೋಹಕ ಡ್ರಾಪ್‌ಗಳ ಮೂಲಕ ಗೇಮ್‌ ಗೆದ್ದ ವೀನಸ್‌, ಆಕರ್ಷಕ ಏಸ್‌ಗಳನ್ನು ಸಿಡಿಸಿ ಸೆರೆನಾ ಮೇಲೆ ಒತ್ತಡ ಹೇರಿದರು. ವೀನಸ್‌ ರ‍್ಯಾಕೆಟ್‌ನಿಂದ ಸಿಡಿಯುತ್ತಿದ್ದ ಕ್ರಾಸ್‌ಕೋರ್ಟ್‌ ಹೊಡೆತಗಳಿಗೆ ಸೆರೆನಾ ನಿರುತ್ತರರಾದರು.

ಎರಡನೇ ಸೆಟ್‌ನಲ್ಲೂ ವೀನಸ್‌  ಉತ್ತಮ ಆಟವಾಡಿದರು. ಎಂಟನೇ ಗೇಮ್‌ವರೆಗೆ ಸೆರೆನಾ ಅವರಿಂದ ಕಠಿಣ ಸವಾಲು ಎದುರಿಸಿದ ಅವರು ಆ ನಂತರದ ಎರಡು ಗೇಮ್‌ಗಳಲ್ಲಿ ಪ್ರಾಬಲ್ಯ ಮೆರೆದರು.

ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ 6–2, 6–1ರಲ್ಲಿ ಸರ್ಬಿಯಾದ ಫಿಲಿಪ್‌ ಕ್ರಾಜಿನೊವಿಚ್‌ ವಿರುದ್ಧ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry