ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟ್‌ ವಿಕೆಟ್‌: ರಾಹುಲ್‌ ಮೊದಲಿಗ!

Last Updated 13 ಮಾರ್ಚ್ 2018, 19:32 IST
ಅಕ್ಷರ ಗಾತ್ರ

ಕೊಲಂಬೊ: ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್‌ ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಹಿಟ್‌ವಿಕೆಟ್  ಆದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಶ್ರೀಲಂಕಾ ವಿರುದ್ಧ ಸೋಮವಾರ ರಾತ್ರಿ ನಡೆದ ನಿದಾಸ್ ಟ್ರೋಫಿ ತ್ರಿಕೋನ ಸರಣಿಯ ಪಂದ್ಯದ ಹತ್ತನೇ ಓವರ್‌ನಲ್ಲಿ ಲೆಗ್‌ ಸ್ಪಿನ್ನರ್‌ ಜೀವನ್ ಮೆಂಡಿಸ್ ಎಸೆತದಲ್ಲಿ ಅವರು ಔಟಾದರು.

ಮೆಂಡಿಸ್ ಎಸೆತವನ್ನು ಹಿಂದಕ್ಕೆ ಸರಿದು ಲೆಗ್‌ ಸೈಡ್‌ಗೆ ತಳ್ಳಲು ಪ್ರಯತ್ನಿ ಸಿದ ರಾಹುಲ್ ಅವರ ಬಲಗಾಲು ಸ್ಟಂಪ್‌ಗೆ ತಾಗಿತು. ಇದಕ್ಕೂ ಹಿಂದಿನ ಎಸೆತದಲ್ಲಿ ಅವರು ರನ್ ಔಟ್ ಆಗುವ ಸಾಧ್ಯತೆಯಿಂದ ಬಚಾವಾಗಿದ್ದರು.

ಆಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಹಿಟ್ ವಿಕೆಟ್ ಆದ ಹತ್ತನೇ ಬ್ಯಾಟ್ಸ್‌ಮನ್ ರಾಹುಲ್‌. ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 65 ಹಿಟ್ ವಿಕೆಟ್‌ಗಳಾಗಿದ್ದು ಭಾರತದ ನಾಲ್ವರು ಈ ಪಟ್ಟಿಯಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಮೊದಲು ಹಿಟ್ ವಿಕೆಟ್ ಔಟಾದ ಭಾರತದ ಬ್ಯಾಟ್ಸ್‌ಮನ್ ನಯನ್ ಮೋಂಗಿಯಾ (1995, ಪಾಕಿಸ್ತಾನ ವಿರುದ್ಧ). ಅನಿಲ್ ಕುಂಬ್ಳೆ (2003; ನ್ಯೂಜಿಲೆಂಡ್ ವಿರುದ್ಧ), ಸಚಿನ್ ತೆಂಡೂಲ್ಕರ್‌ (2008; ಆಸ್ಟ್ರೇಲಿಯಾ) ಮತ್ತು ವಿರಾಟ್ ಕೊಹ್ಲಿ (2011; ಇಂಗ್ಲೆಂಡ್‌) ಈ ಸಾಲಿನಲ್ಲಿದ್ದಾರೆ. 

ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 158 ಹಿಟ್ ವಿಕೆಟ್‌ಗಳಾಗಿದ್ದು ಈ ಪಟ್ಟಿಗೆ ಸೇರಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಲಾಲಾ ಅಮರನಾಥ್‌ (1949; ವೆಸ್ಟ್‌ ಇಂಡೀಸ್‌ ವಿರುದ್ಧ). ಮೊಹಿಂದರ್ ಅಮರನಾಥ್‌ ಟೆಸ್ಟ್‌ನಲ್ಲಿ ಮೂರು ಬಾರಿ ಹಿಟ್ ವಿಕೆಟ್ ರೂಪದಲ್ಲಿ ಔಟಾಗಿದ್ದಾರೆ.

ವಿರಾಟ್ ಕೊಹ್ಲಿ, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಹಿಟ್ ವಿಕೆಟ್ ಆದ ಏಕೈಕ ಬ್ಯಾಟ್ಸ್‌ಮನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT