ಪೋಕ್ಸೊ; ಉಪನ್ಯಾಸಕ ಸೆರೆ

7

ಪೋಕ್ಸೊ; ಉಪನ್ಯಾಸಕ ಸೆರೆ

Published:
Updated:

ಬೆಂಗಳೂರು: ಎರಡು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಖಾಸಗಿ ಕಾಲೇಜು ಉಪನ್ಯಾಸಕ ಮ್ಯಾಥ್ಯೂ (43) ಎಂಬಾತನಿಗೆ ಜನ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಬಾಲಕಿಯ ತಾಯಿ ಕೊಟ್ಟ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಕೇರಳದ ಮ್ಯಾಥ್ಯೂ, ಎರಡು ವರ್ಷಗಳಿಂದ ನಗರದಲ್ಲಿದ್ದಾನೆ. ಆತನ ಪಕ್ಕದ ಮನೆಯಲ್ಲೇ ಬಾಲಕಿ ತನ್ನ ಪೋಷಕರೊಂದಿಗೆ ನೆಲೆಸಿದ್ದಾಳೆ. ರಾತ್ರಿ 7 ಗಂಟೆ ಸುಮಾರಿಗೆ ಬಾಲಕಿ ಮನೆ ಮುಂದೆ ಆಟವಾಡುತ್ತಿದ್ದಳು. ಈ ವೇಳೆ ಆರೋಪಿ ಚಾಕೊಲೇಟ್‌ನ ಆಮಿಷವೊಡ್ಡಿ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.

ಬಾಲಕಿಯ ಚೀರಾಟ ಕೇಳಿದ ಸ್ಥಳೀಯರು, ಆತನ ಮನೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೃತ್ಯದಿಂದ ಸಿಟ್ಟಿಗೆದ್ದ ಜನ, ಹಿಗ್ಗಾಮುಗ್ಗಾ ಥಳಿಸಿ ಆತನನ್ನು ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ. ಆರೋಪಿ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೊತ್ತನೂರು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry