ಉರಗ ತಜ್ಞ ಕಾಶಿನಾಥ್ ನೆಗಳೂರು ಮಠ ನಿಧನ

7

ಉರಗ ತಜ್ಞ ಕಾಶಿನಾಥ್ ನೆಗಳೂರು ಮಠ ನಿಧನ

Published:
Updated:
ಉರಗ ತಜ್ಞ ಕಾಶಿನಾಥ್ ನೆಗಳೂರು ಮಠ ನಿಧನ

ಬಳ್ಳಾರಿ: ಇಲ್ಲಿನ ವಿಮ್ಸ್ ಉದ್ಯೋಗಿ, ಉರಗ ತಜ್ಞ, ಹವ್ಯಾಸಿ ಛಾಯಾಗ್ರಾಹಕ ಕಾಶಿನಾಥ್ ನೆಗಳೂರುಮಠ (49) ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ‌ನಿಧನರಾದರು.

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮಾಡ್ಯುಲರ್ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾಶಿನಾಥ್ ಅವರು ಕಳೆದ ಆರು ತಿಂಗಳುಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಮೂಲತಃ ಹಾವೇರಿ ಜಿಲ್ಲೆಯ ಗುತ್ತಲದವರಾದ ನೇಗಳೂರು ಮಠ ಅವರ ಅಂತ್ಯಕ್ರಿಯೆ ಅದೇ ಗ್ರಾಮದಲ್ಲಿ  ಮಧ್ಯಾಹ್ನ ಜರುಗಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಕಳೆದ ಹದಿಮೂರು ವರ್ಷಗಳಿಂದ ವಿಮ್ಸ್‌ನಲ್ಲಿ ಕಲಾವಿದರಾಗಿದ್ದರು. ಸಾವಿರಕ್ಕೂ ಹೆಚ್ಚು ಹಾವು ಹಿಡಿದು ಅರಣ್ಯಕ್ಕೆ ಕಳುಹಿಸಿದ ಉರಗ ತಜ್ಞರಾಗಿ, ತಮ್ಮ ನೆಚ್ಚಿನ ತಾಣ ಕರಡಿಧಾಮದಲ್ಲಿಯೂ ಸೇರಿದಂತೆ ಅನೇಕ ಕಡೆ ಪರಿಸರ ಹಾಗೂ ವನ್ಯಜೀವಿ ಹವ್ಯಾಸಿ ಛಾಯಾಗ್ರಾಹಕರಾಗಿ, ಪ್ರತಿ ವರ್ಷ ಮಣ್ಣಿನ ಗಣಪ ತಯಾರಿಸಿ ಪ್ರಸಿದ್ಧಿ ಪಡೆದಿದ್ದರು.

ಪರಿಸರ ಪ್ರೇಮಿಯಾಗಿದ್ದ ಅವರ ಕಾರ್ಯಸಾಧನೆಗೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ. ಇಬ್ಬರು ಸಹೋದರರು, ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅವರು ಅಗಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry