ಗೋಕಾಕ: ಅಗ್ನಿ ಅವಘಡ: ಬಟ್ಟೆ ಅಂಗಡಿ ಭಸ್ಮ

7

ಗೋಕಾಕ: ಅಗ್ನಿ ಅವಘಡ: ಬಟ್ಟೆ ಅಂಗಡಿ ಭಸ್ಮ

Published:
Updated:

ಗೋಕಾಕ: ಇಲ್ಲಿಯ ಗುರುವಾರ ಪೇಟೆಯ ವೀರಭದ್ರೇಶ್ವರ ದೇವಾಲಯ ಪಕ್ಕದ ಕಾಂಪ್ಲೆಕ್ಸ್‌ನಲ್ಲಿ ಮಂಗಳವಾರ ಬೆಳಿಗ್ಗೆ ಶಾರ್ಟ್‌ ಸರ್ಕಿಟ್‌ನಿಂದ ಉಂಟಾದ ಬೆಂಕಿಯಿಂದ ಸಿದ್ಧ ಉಡುಪುಗಳ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿ, ಸುಮಾರು ₹ 4 ಲಕ್ಷ ಹಾನಿ ಉಂಟಾಗಿದೆ.

ಸಿದ್ಧ ಉಡುಪು, ಪೀಠೋಪಕರಣ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ‘ನಮೋ ಕಲೆಕ್ಷನ್ಸ್’ ಅಂಗಡಿ ಮಾಲೀಕ ಲಕ್ಷ್ಮಣ ಭೀಮಪ್ಪ ತೋಳಿ ಎಂಬುವವರು ದೂರಿನಲ್ಲಿ ತಿಳಿಸಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳು, ಸಾಲ ನೀಡಿದ ಬ್ಯಾಂಕ್‌ ಅಧಿಕಾರಿಗಳು, ವಿಮೆ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry