ಪಡಿತರ ಚೀಟಿಗಾಗಿ ಪ್ರತಿಭಟನೆ: ಕಾರ್ಪೊರೇಟರ್‌ ಮಂಜುನಾಥ ರೆಡ್ಡಿ ಹಾಗೂ ಬೆಂಬಲಿಗರಿಂದ ದಾಂಧಲೆ

7

ಪಡಿತರ ಚೀಟಿಗಾಗಿ ಪ್ರತಿಭಟನೆ: ಕಾರ್ಪೊರೇಟರ್‌ ಮಂಜುನಾಥ ರೆಡ್ಡಿ ಹಾಗೂ ಬೆಂಬಲಿಗರಿಂದ ದಾಂಧಲೆ

Published:
Updated:
ಪಡಿತರ ಚೀಟಿಗಾಗಿ ಪ್ರತಿಭಟನೆ: ಕಾರ್ಪೊರೇಟರ್‌ ಮಂಜುನಾಥ ರೆಡ್ಡಿ ಹಾಗೂ ಬೆಂಬಲಿಗರಿಂದ ದಾಂಧಲೆ

ಬೆಂಗಳೂರು: ಪಡಿತರ ಚೀಟಿಗಾಗಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಮಾಜಿ ಮೇಯರ್, ಕಾರ್ಪೊರೇಟರ್, ಕಾಂಗ್ರೆಸ್‌ ನಾಯಕ ಬಿ.ಎನ್‌. ಮಂಜುನಾಥ ರೆಡ್ಡಿ ಹಾಗೂ ಬೆಂಬಲಿಗರು ದಾಂಧಲೆ ನಡೆಸಿದ ಘಟನೆ ಬಿಟಿಎಂ ಲೇಔಟ್‌ನಲ್ಲಿ ನಡೆದಿದೆ.

ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ನೂರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದಾಗ ದಾಂಧಲೆ ನಡೆಸಲಾಗಿದೆ. ಇದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರವಾಗಿದೆ.

ಕಾರ್ಪೊರೇಟರ್ ಹಾಗೂ ಬೆಂಬಲಿಗರು ದಾಂಧಲೆ ನಡೆಸುತ್ತಿರುವ ವಿಡಿಯೊವನ್ನು ರವಿಕೃಷ್ಣಾ ರೆಡ್ಡಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಪಡಿತರ ಚೀಟಿ ಮಾಡಿ ಐದು ವರ್ಷಗಳಾಗಿವೆ. ಆದರೆ, ಇನ್ನೂ ಬಂದಿಲ್ಲ. ಈಗ ಬಂದು ₹ 2000  ಲಂಚ ಕೊಡ್ತೀವಿ ಹೊರಟುಹೋಗಿ ಎಂದು ಆಮಿಷವೊಡ್ಡುತ್ತಿದ್ದಾರೆ’ ಎಂಬುದಾಗಿ ಪ್ರತಿಭಟನಾನಿರತ ಮಹಿಳೆಯರು ಆರೋಪ ಮಾಡಿರುವ ವಿಡಿಯೊವನ್ನೂ ರವಿಕೃಷ್ಣಾ ರೆಡ್ಡಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಬಿ.ಎನ್‌. ಮಂಜುನಾಥ ರೆಡ್ಡಿ ವಿರುದ್ಧ ರವಿಕೃಷ್ಣಾ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry