ವಿಷ ಸೇವಿಸಿ ಪ್ರೇಮಿಗಳ ಆತ್ಮಹತ್ಯೆ

7

ವಿಷ ಸೇವಿಸಿ ಪ್ರೇಮಿಗಳ ಆತ್ಮಹತ್ಯೆ

Published:
Updated:

ಭಾರತೀನಗರ: ಸಮೀಪದ ಕೆ. ಶೆಟ್ಟಹಳ್ಳಿ–ಯಡಗನಹಳ್ಳಿ ಮಾರ್ಗ ಮಧ್ಯೆ ಮಂಗಳವಾರ ಸಂಜೆ ಪ್ರೇಮಿಗಳಿಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಳವಳ್ಳಿ ತಾಲ್ಲೂಕಿನ ಅಂತರಹಳ್ಳಿ ಗ್ರಾಮದ ಡಿ. ರಂಜಿತಾ (23), ಹುಲ್ಲಹಳ್ಳಿ ಗ್ರಾಮದ ಯತೀಶ್‌ (25) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.

ಆತ್ಮಹತ್ಯೆಗೆ ಪ್ರೇಮ ವೈಫಲ್ಯವೇ ಕಾರಣ ಎಂದು ಶಂಕಿಸಲಾಗಿದೆ. ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಪೋಷಕರು ಡಿ. ರಂಜಿತಾ ಅವರನ್ನು ಕನಕಪುರ ತಾಲ್ಲೂಕು ಸಾತನೂರು ಸಮೀಪದ ಬೊಮ್ಮನಹಳ್ಳಿಯ ಯುವಕನಿಗೆ ಮದುವೆ ಮಾಡಿ ಕೊಟ್ಟಿದ್ದರು.

ಆದರೆ ರಂಜಿತಾಗೆ ಪತಿಯ ಜೊತೆ ಇರಲು ಇಷ್ಟವಿಲ್ಲದ ಕಾರಣ ಗಂಡನನ್ನು ತೊರೆದು ತವರು ಮನೆಗೆ ವಾಪಸ್‌ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry