ಕಾಂಗ್ರೆಸ್‌–ಜೆಡಿಎಸ್‌ ಬೆಂಬಲಿಗರ ನಡುವೆ ವಾಗ್ವಾದ

7

ಕಾಂಗ್ರೆಸ್‌–ಜೆಡಿಎಸ್‌ ಬೆಂಬಲಿಗರ ನಡುವೆ ವಾಗ್ವಾದ

Published:
Updated:

ಮಾಗಡಿ: ಫೇಸ್‌ಬುಕ್‌ ಮತ್ತು ವಾಟ್ಸ್‌ ಆ್ಯಪ್‌ಗಳ ಪರ ಮತ್ತು ವಿರೋಧ ಬರಹಗಳಿಗೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಕಲ್ಯಬಾಗಿಲು ಬಳಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬೆಂಬಲಿಗ ಯುವಕರು ಮಾತಿನ ಚಕಮಕಿ ನಡೆಸಿದ್ದಾರೆ.

ಶಾಸಕ ಎಚ್‌.ಸಿ.ಬಾಲಕೃಷ್ಣ ಬೆಂಬಲಿಗ ಆನಂದ್‌ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ಅವರ ಬೆಂಬಲಿಗ ಮುನಿರಾಜು ಅವರು ಪರಸ್ಪರ ತಮ್ಮ ನಾಯಕರ ಬಗ್ಗೆ ಪರ ಮತ್ತು ವಿರೋಧವಾಗಿ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿಕೊಂಡಿದ್ದಾರೆ.

ಶಾಸಕರ ಬೆಂಬಲಿಗರಾದ ಮೂರ್ತಿ ಮತ್ತು ಆನಂದ್‌ ಅವರ ಮನೆಯ ಬಳಿಗೆ ಎ.ಮಂಜುನಾಥ ಬೆಂಬಲಿಗರು ಹೋಗಿ ಪ್ರಶ್ನಿಸಿದ್ದರು. ಉಭಯ ಬಣಗಳ ಯುವಕರು ಪರಸ್ಪರ ಮಾತಿನ ಚಕಮುಕಿ ನಡೆಸಿದ್ದಾರೆ.

ಪೊಲೀಸರು ಮದ್ಯ ಪ್ರವೇಶಿಸಿ ಎರಡು ಕಡೆಯ ಯುವಕರಿಗೆ ಬುದ್ದಿ ಹೇಳಿ ಘಟನೆಯನ್ನು ತಿಳಿಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry