‘ವಿಮಾ ಗ್ರಾಮ’ವಾಗಿ ಮುದಗಾ ಘೋಷಣೆ

7

‘ವಿಮಾ ಗ್ರಾಮ’ವಾಗಿ ಮುದಗಾ ಘೋಷಣೆ

Published:
Updated:

ಕಾರವಾರ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಕಾರವಾರದ ಶಾಖೆಯು ತಾಲ್ಲೂಕಿನ ಮುದಗಾ ಗ್ರಾಮವನ್ನು ‘ವಿಮಾ ಗ್ರಾಮ’ ಎಂದು ಘೋಷಿಸಿದೆ. ಈ ನಿಟ್ಟಿನಲ್ಲಿ ಮುದಗಾದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡ ಸಮಾರಂಭದಲ್ಲಿ ₹ 5 ಸಾವಿರದ ಚೆಕ್‌ ಅನ್ನು ಶಾಲೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೀಡಲಾಯಿತು.

ಎಲ್‌ಐಸಿಯ ಧಾರವಾಡ ವಿಭಾಗದ ಮುಖ್ಯಸ್ಥ ಪ್ರಕಾಶ ಬಂಟ ಕಾರ್ಯಕ್ರಮ ಉದ್ಛಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕ ರಾಮಾ ಬಂಟ ಸ್ವಾಗತಿಸಿದರು. ಎಲ್‌ಐಸಿ ಕಾರವಾರದ ಶಾಖಾಧಿಕಾರಿ ಎಸ್.ರುಕ್ಷ್ಮಿಣಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಾಮೋದರ ತಾಂಡೇಲ ಅವರೂ ಇದ್ದರು.

‘ವಿಮಾ ಗ್ರಾಮ’ವನ್ನಾಗಿ ಮಾಡಲು ಶ್ರಮಿಸಿದ ಎಲ್‌ಐಸಿ ಪ್ರತಿನಿಧಿ ಆಫ್ರಿನ್ ಶೇಖ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.  ಶಿಕ್ಷಕಿ ಮಧುರಾ ನಾಯಕ ಕಾರ್ಯಕ್ರಮ ನಿರೂಪಿಸಿದರು. ಭವಾನಿ ನಾಯಕ ವಂದಿಸಿದರು.

ಯಕ್ಷ ಸಂಭ್ರಮ ಇಂದು

ಯಲ್ಲಾಪುರ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸುಪಾ ಚಾರಿಟಬಲ್ ಫೌಂಡೇಷನ್ ಜೊಯಿಡಾ, ಇಬ್ಬನಿ ಫೌಂಡೇಷನ್ ಮಾಗೋಡ ಸಂಯುಕ್ತ ಆಶ್ರಯದಲ್ಲಿ ‘ಯಕ್ಷ ಸಂಭ್ರಮ-2018’ ಮಾ.14ರ ಸಂಜೆ 7.30ಕ್ಕೆ ತಾಲ್ಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ನಂತರ ‘ಸುಧನ್ವಾರ್ಜುನ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry