ಟಿಪ್ಪರ್ ಡಿಕ್ಕಿ; ಅಕ್ಕ–ತಮ್ಮ ಸಾವು

ಬುಧವಾರ, ಮಾರ್ಚ್ 20, 2019
26 °C

ಟಿಪ್ಪರ್ ಡಿಕ್ಕಿ; ಅಕ್ಕ–ತಮ್ಮ ಸಾವು

Published:
Updated:
ಟಿಪ್ಪರ್ ಡಿಕ್ಕಿ; ಅಕ್ಕ–ತಮ್ಮ ಸಾವು

ಎಚ್.ಡಿ.ಕೋಟೆ: ತಾಲ್ಲೂಕಿನ ಜಕ್ಕಹಳ್ಳಿ ಸಮೀಪ ಮಂಗಳವಾರ ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸಹೋದರ ಹಾಗೂ ಸಹೋದರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸರಗೂರು ಪಟ್ಟಣದ ಪೌರಕಾರ್ಮಿಕ ಕಾಲೊನಿ ನಿವಾಸಿ ರಾಚ ಎಂಬುವವರ ಮಕ್ಕಳಾದ ರೂಪೇಶ್ (25) ಮತ್ತು ಲಕ್ಷ್ಮಿದೇವಿ (30) ಮೃತಪಟ್ಟವರು.

ಸೊಳ್ಳೇಪುರ ಎ ಹಾಡಿಯ ಏಕಲವ್ಯ ವಸತಿ ಶಾಲೆಯಲ್ಲಿ ಲಕ್ಷ್ಮಿದೇವಿ ಕೆಲಸ ಮಾಡುತ್ತಿದ್ದರು. ಇಲ್ಲಿಂದ ಅಕ್ಕ ಲಕ್ಷ್ಮಿದೇವಿ ಅವರನ್ನು ಕರೆದುಕೊಂಡು ಸರಗೂರಿಗೆ ಬೈಕಿನಲ್ಲಿ ಹೋಗುತ್ತಿದ್ದರು. ಈ ಸಂದರ್ಭ, ಹ್ಯಾಂಡ್‌ಪೋಸ್ಟ್ ಕಡೆಯಿಂದ ಸರಗೂರು ಕಡೆಗೆ ತೆರಳುತ್ತಿದ್ದ ಟಿಪ್ಪರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಚಾಲಕ ತಲೆಮರೆಸಿಕೊಂಡಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry