ಬಿಹಾರ ಉಪಚುನಾವಣೆ: ಭುಬುವಾದಲ್ಲಿ ಬಿಜೆಪಿ; ಜಹನಾಬಾದ್‌ನಲ್ಲಿ ಆರ್‌ಜೆಡಿ ಗೆಲುವು

7

ಬಿಹಾರ ಉಪಚುನಾವಣೆ: ಭುಬುವಾದಲ್ಲಿ ಬಿಜೆಪಿ; ಜಹನಾಬಾದ್‌ನಲ್ಲಿ ಆರ್‌ಜೆಡಿ ಗೆಲುವು

Published:
Updated:
ಬಿಹಾರ ಉಪಚುನಾವಣೆ: ಭುಬುವಾದಲ್ಲಿ ಬಿಜೆಪಿ; ಜಹನಾಬಾದ್‌ನಲ್ಲಿ ಆರ್‌ಜೆಡಿ ಗೆಲುವು

ಬೆಂಗಳೂರು: ಮಾ.11ರಂದು ಬಿಹಾರದ ಒಂದು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಮತಎಣಿಕೆ ಬುಧವಾರ ನಡೆಯುತ್ತಿದೆ.

ಅರರಿಯಾ ಲೋಕಸಭಾ ಕ್ಷೇತ್ರ, ಭಬುವ ಮತ್ತು ಜಹನಾಬಾದ್‌ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತಎಣಿಕೆ ನಡೆದಿದ್ದು, 35 ಸಾವಿರಕ್ಕೂ ಹೆಚ್ಚು ಅಂತರ ಕಾಯ್ದುಕೊಂಡಿರುವ ಆರ್‌ಜೆಡಿ ಅಭ್ಯರ್ಥಿ ಕುಮಾರ್‌ ಕೃಷ್ಣ ಮೋಹನ್‌ ಜಹನಾಬಾದ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಭಬುವ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಿಂಕಿ ರಾಣಿ ಪಾಂಡೆ 9 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಪಡೆದಿದ್ದಾರೆ. ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.

ಮಹಾಮೈತ್ರಿಯನ್ನು ಮುರಿದು ಸರ್ಕಾರ ರಚಿಸಿದ ಬಳಿಕ ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎಗೆ ಇದು ಮೊದಲ ಚುನಾವಣಾ ಪರೀಕ್ಷೆಯಾಗಿದೆ.

ಅರರಿಯಾ ಲೋಕಸಭಾ ಕ್ಷೇತ್ರದಲ್ಲಿಯೂ ಆರ್‌ಜೆಡಿಯ ಸರ್ಫರಾಜ್‌ ಆಲಂ 21 ಸಾವಿರ ಮತಗಳ ಮುನ್ನಡೆ ಕಾಯ್ಡುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry