ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

53ನೇ ವಸಂತಕ್ಕೆ ಕಾಲಿಟ್ಟ ‘ಮಿಸ್ಟರ್ ಪರ್ಫೆಕ್ಟ್‌’

Last Updated 14 ಮಾರ್ಚ್ 2018, 11:25 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ಅಮೀರ್‌ ಖಾನ್‌ ಅವರು ಬುಧವಾರ 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 

ಮಿ. ಪರ್ಫೆಕ್ಷನಿಸ್ಟ್‌ ಎಂಬ ಖ್ಯಾತಿಯ ಅಮೀರ್‌ ಖಾನ್‌ ಹುಟ್ಟಿದ್ದು 1965, ಮಾರ್ಚ್‌ 14ರಂದು. 1984ರಲ್ಲಿ ‘ಹೋಲಿ’ ಸಿನಿಮಾದ ಮೂಲಕ ಸಿನಿರಂಗ ಇವರು ಪ್ರವೇಶಿಸಿದರು. ಸಿನಿಮಾ ಯಶಸ್ಸುಗಳಿಸದಿದ್ದರೂ, ‘ಖಯಾಮತ್‌ ಸೇ ಖಯಾಮತ್‌ ತಕ್‌’ ಸಿನಿಮಾಕ್ಕೆ ಅವಕಾಶ ದೊರಕಿತು. ಈ ಸಿನಿಮಾ ಭರ್ಜರಿ ಯಶಸ್ಸು ಗಳಿಸಿತು.

ಜೊತೆಗೆ ಅಮೀರ್‌ಗೆ ‘ಬೆಸ್ಟ್‌ ಮೇಲ್‌ ಡಿಬೆಟ್‌’ ಎಂದು ಫಿಲ್ಮ್‌ಫೇರ್‌ ಪ್ರಶಸ್ತಿಯೂ ದೊರಕಿತು. ವ್ಯಾಪಾರ ದೃಷ್ಟಿಯಿಂದ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ, ನನ್ನ ಹೃದಯ ಸ್ವರ್ಶಿಸುವಂತಹ ಸಿನಿಮಾಗಳಲ್ಲಿ ನಟಿಸುತ್ತೇನೆ ಎನ್ನುವ ಇವರು, ಅದ್ಭುತ ಅಭಿನಯದ ಮೂಲಕವೇ ಅಭಿಮಾನಿಗಳ ಮನ ಗೆದಿದ್ದಾರೆ.

ದೇಶದಲ್ಲಿ ಮಾತ್ರವಲ್ಲದೇ ಚೀನಾದಲ್ಲಿಯೂ ಅಮೀರ್‌ ಜನಪ್ರಿಯ ನಟ ಎಂಬ ಹೆಸರು ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT